ವೇದಬ್ರಹ್ಮ ಭಾನುಪ್ರಕಾಶ್ ತಂಡ ಬೆಂಬಲಿಸಲು ಹರೀಶ್ ಕಡಕೋಳ‌ ಮನವಿ

Spread the love

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಶೋಕ್ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ವೇದ ಬ್ರಹ್ಮಶ್ರೀ ಭಾನುಪ್ರಕಾಶ್ ಶರ್ಮ ಅವರನ್ನು ಬೆಂಬಲಿಸಬೇಕೆಂದು
ವಿಪ್ರ ಮುಖಂಡರಾದ ಹರೀಶ್ ಕಡಕೋಳ ಮನವಿ ಮಾಡಿದರು

ಮೈಸೂರು ಜಿಲ್ಲಾ ಪ್ರತಿನಿಧಿ 2 ಸ್ಥಾನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಡಕೋಳ ಜಗದೀಶ್ ಸ್ಪರ್ಧಿಸಿದ್ದು,ಸವರನ್ನೂ ಬೆಂಬಲಿಸಬೇಕೆಂದು ಕೋರಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ವಿಪ್ರ ಜಾಗೃತಿ ವೇದಿಕೆ ಹಾಗೂ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಮುದಾಯದ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಸ್ಪರ್ಧಿಗಳು ಅವಿರತ ಶ್ರಮಿಸಲಿದ್ದಾರೆ. ಏ.13 ರ ಮತದಾನದ ದಿನದಂದು ಆಗಮಿಸಿ ಕಡ್ಡಾಯವಾಗಿ ಮತದಾನ ಮಾಡಿ ಗೆಲುವಿಗೆ ಸಹಕರಿಸಬೇಕು ಎಂದು ಕೋರಿದರು.

ಮೈಸೂರಿನ ಬಗನಿ ಸೇವಾ ಸಮಾಜದಲ್ಲಿ
ಮತದಾನ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ನಡೆಯಲಿದೆ. ಬ್ರಾಹ್ಮಣ ಬಂಧುಗಳು ತಪ್ಪದೇ ಆಗಮಿಸಿ ಮತದಾನ ಮಾಡುವುದರ ಮೂಲಕ ಬ್ರಾಹ್ಮಣ ಮಹಾಸಭಾ ಸಂಘಟನೆಗೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಪ್ರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ನಾಗರಾಜು,ಮುಳ್ಳೂರು ಸುರೇಶ್, ಚಕ್ರಪಾಣಿ,ಲತಾ ಬಾಲಕೃಷ್ಣ, ಮಂಜುನಾಥ್, ಜ್ಯೋತಿ ಉಪಸ್ಥಿತರಿದ್ದರು.