ಸುರಕ್ಷಿತವಾಗಿ ಭೂಮಿಗೆ ಬಂದ ಸುನೀತಾ,ಬುಚ್:ಮೈಸೂರಿನಲ್ಲಿ ಸಂಭ್ರಮಾಚರಣೆ

Spread the love

ಮೈಸೂರು: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರು ಸುರಕ್ಷಿತವಾಗಿ ಭೂಮಿಗೆ ಬಂದುದಕ್ಕೆ ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಸಂಭ್ರಮಾಚರಣೆ ಮಾಡಲಾಯಿತು.

ಮೈಸೂರಿನ ಅಗ್ರಹಾರದಲ್ಲಿ ಶ್ರೀ ದುರ್ಗಾ ಫೌಂಡೇಶನ್ ನವರು‌ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ
ಭಾವಚಿತ್ರ ಹಿಡಿದು ಭಾರತ್ ಮಾತಾ ಕಿ ಜೈ ಹಾಗೂ ಸುನಿತಾ ವಿಲಿಯಮ್ಸ್ ಹಾಗೂ ತಂಡಕ್ಕೆ ಜೈಕಾರ ಕೂಗಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ
ವೈದ್ಯರಾದ ಡಾ.ಶ್ರೀ ನಿವಾಸ್ ಆಚಾರ್ಯ ಅವರು,ಸಂಶೋಧನೆಯ ನಿಮಿತ್ತ ಒಂದು ವಾರದ ಮಟ್ಟಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪಯಣ ಬೆಳೆಸಿದ್ದ ಸುನಿತಾ ವಿಲಿಯಮ್ಸ್ ಅವರು ತಾಂತ್ರಿಕ ವೈಫಲ್ಯದಿಂದ ಭೂಮಿಗೆ ಮರಳಲಾಗದೆ 9 ತಿಂಗಳಿಂದ ಬಾಹ್ಯಾಕಾಶದಲ್ಲೆ ಉಳಿಯುವಂತಾಗಿತ್ತು ಎಂದು ಸ್ಮರಿಸಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ದಿಟ್ಟತನದಿಂದ‌‌ ಎದುರಿಸಿ ಭೂಮಿಗೆ ವಾಪಸ್ ಆಗಿರುವ ಸುನೀತಾ ಅವರ ಸಾಹಸ ಮತ್ತು ಸಾಧನೆ ಅಸಂಖ್ಯಾತ ಯುವ ವಿಜ್ಞಾನಿಗಳಿಗೆ, ಸಂಶೋಧಕರಿಗೆ ಹಾಗೂ ಮಹಿಳೆಯರಿಗೆ ಸ್ಪೂರ್ತಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲ ಸಚಿವರಾದ ಬಾಬುರಾವ್, ಸಾಯಿಬಾಬಾ ದೇವಸ್ಥಾನದ ಅರ್ಚಕರಾದ ಮಹೇಶ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕಾಂಗ್ರೆಸ್ ಯುವ ಮುಖಂಡ ಸಂತೋಷ್ ಕಿರಾಲು, ಹೇಮಾ ಮತ್ತಿತರರು ಹಾಜರಿದ್ದರು.