ಮೈಸೂರು: ಮೈಸೂರಿನ ಹೂಟಗಳ್ಳಿಯ ಕೆಹೆಚ್ ಬಿ ಕಾಲೋನಿಯಲ್ಲಿರುವ ಸುದರ್ಶನ ವಿದ್ಯಾಸಂಸ್ಥೆಯಲ್ಲಿ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲಾಯಿತು.
ವಿವಿಧ ವೇಷಭೂಷಣ ತೊಟ್ಟು ಮಕ್ಕಳು ಎಲ್ಲರ ಮನ ಗೆದ್ದರು.ಮಕ್ಕಳಿಗೆ ಬಹುಮಾನ ನೀಡಿ ಸಂಸ್ಥೆಯ ಕಾರ್ಯರ್ಶಿ ಎನ್.ಶ್ರೀನಿವಾಸನ್ ಪ್ರೋತ್ಸಾಹಿಸಿದರು.

ಈ ಸಂಭ್ರಮದಲ್ಲಿ ರಘುಲಾಲ್ ಅಂಡ್ ಕಂಪನಿಯ ಮುಖ್ಯಸ್ಥರಾದ ರಘುಲಾಲ್, ಎಂ.ಹೆಚ್.ಪ್ರಕಾಶ್ ಸೇರಿದಂತೆ ಸಂಸ್ಥೆಯ ಮುಖ್ಯೋಪಧ್ಯಾಯರು,
ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.