ಮೈಸೂರು: ಪೂಜ್ಯ ತಾತಯ್ಯನವರ 180ನೇ ಜನ್ಮದಿನ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಅನಾಥಾಲಯದ ಹಳೆಯ ವಿದ್ಯಾರ್ಥಿಗಳ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮುಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್,ಈ ಇಬ್ಬರು ಮಹನೀಯರು ಸಮಾಜ ಸುಧಾರಣೆ ಯಂತಹ ಸೇವೆಯನ್ನ ಮಾಡಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ ಎಂದು ಬಣ್ಣಿಸಿದರು.
ಅದರಲ್ಲೂ ರಾಜಕೀಯ, ಧಾರ್ಮಿಕ, ಶಿಕ್ಷಣ ಕ್ಷೇತ್ರ, ಪತ್ರಿಕಾರಂಗ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಾತಯ್ಯ ಅವರು ತಮ್ಮದೇ ಆದ ಚಾಪನ್ನು ಮೂಡಿಸಿರುವುದು ವಿಶೇಷ ಎಂದು ತಿಳಿಸಿದರು.
ಮರಿಮಲ್ಲಪ್ಪ, ಸದ್ವಿದ್ಯಾ, ಶಾರದಾ ವಿಲಾಸ, ಮಹಾರಾಣಿ ಕಾಲೇಜ್ ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ತಾತಯ್ಯ ಅವರು ಪ್ರಾಣಿಗಳಗೋಸ್ಕರ ಪಿಂಜರಫೋಲನ್ನು ಸ್ಥಾಪನೆ ಮಾಡಿದರು ಎಂದು ಹೇಳಿದರು.
ರಾಜ ಗುರುಗಳಾಗಿ, ರಾಜ ನೀತಿಜ್ಞರಾಗಿ ಪ್ರಜಾಪ್ರತಿನಿಧಿ ಸಭೆಯಲ್ಲಿ ಸದಸ್ಯರಾಗಿ ನ್ಯಾಯವಿದಾಯಕ ಸಭೆಯಲ್ಲಿ ಹಾಗೂ ಪುರಸಭೆ ಸದಸ್ಯರಾಗಿ ಸಾರ್ವಜನಿಕರ ಕುಂದು ಕೊರತೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ರಾಜೀವ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರೊಫೆಸರ್ ಸುಂದರೇಶ್, ವಿಪ್ರ ಮುಖಂಡರಾದ ಕೆ ರಘುರಾಮ್ ವಾಜಪೇಯಿ, ಮಂಜುನಾಥ್ ಹೆಗಡೆ, ಶ್ರೀಧರ್, ರವೀಂದ್ರ, ಎಸ್ ರಂಗನಾಥ, ಪ್ರಶಾಂತ್ ಭರದ್ವಾಜ್, ವಿಕ್ರಮ ಅಯ್ಯಂಗಾರ್, ವೀಣಾ, ಲಕ್ಷ್ಮಿ, ಕುಸುಮಲತಾ ಮುಂತಾದವರು ಹಾಜರಿದ್ದರು.