ಹುಣಸೂರಿನಲ್ಲಿ ಬೀದಿ ನಾಯಿಗಳ ಹಾವಳಿ!ಜನ ಸಂಚರಿಸಲೂ ಆತಂಕ

Spread the love

ಹುಣಸೂರು: ಹುಣಸೂರಿನ ಜೆಎಲ್‌ಬಿ ರಸ್ತೆಯಲ್ಲಿ ಬೀದಿ ನಾಯಿಗಳಿಂದಾಗಿ ಓಡಾಡುವುದೇ ದುಸ್ತರವಾಗಿಬಿಟ್ಟಿದೆ
ನಾಯಿಗಳ ಹಾವಳಿ ವಿಪರೀತವಾಗಿದೆ.

10 ರಿಂದ 15 ನಾಯಿಗಳು ಹಿಂಡು,ಹಿಂಡಾಗಿ ಸದಾ ಸುತ್ತಾಡುತ್ತಲೇ ಇರುತ್ತವೆ.ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಚಲಿಸುವಾಗ ನಾಯಿಗಳು ಅಡ್ಡ ಬರುತ್ತವೆ.

ಹೀಗೆ ಅಡ್ಡ ಬಂದು ಬಹಳಷ್ಟು ಮಂದಿ ದ್ವಿ ಚಕ್ರ ವಾಹನ ಸವಾರರು ಕೆಳಗೆ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿದೆ.

ಸಣ್ಣಪುಟ್ಟ ಮಕ್ಕಳಂತೂ ಹೊರಗೆ ಬರುವಂತೆಯೇ ಇಲ್ಲ, ಅದು ಯಾವಾಗ ನಾಯಿಗಳು ಮಕ್ಕಳ ಮೇಲೆ ಎಗರಿ ಬೀಳುತ್ತವೋ ಎಂಬ ಭಯ ಪೋಷಕರನ್ನು ಕಾಡುತ್ತಿದೆ.

ನಾಯಿಗಳ ಬಗ್ಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆತಂಕ ವ್ಯಕ್ತಪಡಿಸಿದ್ದು ಜನ ಓಡಾಡಲು ಭಯ ಪಡುವಂತಾಗಿದೆ ಎಂದು ವರ್ಷಿಣಿ ನ್ಯೂಸ್‌ ಗೆ ಹೇಳಿದ್ದಾರೆ.

ಹುಣಸೂರು ನಗರಸಭೆ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಂಡು,ಹಿಂಡು ನಾಯಿಗಳು ಒಟ್ಟೊಟ್ಟಿಗೆ ಓಡಾಡುವುದು ಕಾಣುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಯಾರಾದರೂ ಅಪರಿಚಿತರು ಸ್ವಲ್ಪ ಬಟ್ಟೆ ಹರಿದಂತವರನ್ನು ನೋಡಿದರೇ ಒಮ್ಮೆಗೇ ಓಡುತ್ತಾ ಕಿರುಚಾಡುತ್ತಾ ನಾಯಿಗಳು ಎಗರುತ್ತವೆ‌ ಆ ಸಮಯದಲ್ಲಿ ವಾಹನಗಳಿಗೆ ಅಡ್ಡ ಬಂದು ಸ್ಕಿಡ್ ಆದ ಉದಾಹರಣೆಗಳೂ ಇವೆ.

ಬೇರೆ ಊರುಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಗಂಭೀರ ಗಾಯಗೊಂಡ ಉದಾಹರಣೆ ಗಳು ಮೃತಪಟ್ಟಂತಹ ಪ್ರಕರಣಗಳು ನಡೆದಿವೆ.ಸಧ್ಯ ಇನ್ನೂ ಹುಣಸೂರಿನಲ್ಲಿ ಅಂತಹ ಘಟನೆಗಳು ನಡೆದಿಲ್ಲ, ಆದರೆ ನಾಯಿಗಳು ಸಿಟ್ಟುಗೊಂಡು ಯಾವಾಗ ಎಗರಿ ಬೀಳುತ್ತವೊ ಎಂಬ ಭಯದ ವಾತಾವರಣ ಇದೆ,ಬೆಳೆಗ್ಗೆ 7 ಗಂಟೆಯಲ್ಲೇ ಜನ ಸಂಚರಿಸಲು ಅಂಜುತ್ತಿದ್ದಾರೆ ಎಂದು ಚೆಲುವರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಕೂಡಲೇ ನಗರಸಭೆ ಆರೋಗ್ಯ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ, ಅನಾಹುತ ಆದ ನಂತರ ಕ್ರಮ ಕೈಗೊಳ್ಳುವ ಬದಲು ಮೊದಲೇ ಎಚ್ಚೆತ್ತುಕೊಂಡು ಅವುಗಳಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನಾದರೂ ಮಾಡಿಸಲಿ ಇಲ್ಲವೇ ಅರಣ್ಯಕ್ಕಾದರೂ ಸಾಗಿಸಲಿ.