ಮೈಸೂರು: ವೈದ್ಯ ಲೋಕಕ್ಕೇ ಸವಾಲಾಗುವಂತ ವಿಚಿತ್ರ ರೂಪ ಹೊಂದಿದ ಮಗು ಜಿಲ್ಲೆಯ ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದೆ.

ವಿಚಿತ್ರವಾದ ಕಣ್ಣು ಮತ್ತು ತುಟಿ ಮೈಯೆಲ್ಲಾ ಇದ್ದಲಿನಂತೆ ಕಪ್ಪು ಬಣ್ಣ.ನೋಡುಗರನ್ನ ಬೆಚ್ಚಿಬೀಳುವಂತಹ ರೂಪ ಇರುವ ಮಗು ಜನಿಸಿದ್ದು,ಆರೋಗ್ಯ ಇಲಾಖೆ ಬೆರಗಾಗಿದೆ.
ಹುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿರುವ ಗ್ರಾಮ ಒಂದರ ದಂಪತಿಗೆ ವಿಚಿತ್ರ ರೂಪ ಹೊಂದಿರುವ ಮಗು ಹುಟ್ಟಿದೆ.
ಮಗುವಿನ ಆಕಾರ ಮತ್ತು ರೂಪ ಕಂಡು ಗ್ರಾಮಸ್ಥರು ಮತ್ತು ದಂಪತಿ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಈ ವಿಚಿತ್ರ ಮಗುವನ್ನು ಉಳಿಸಿಕೊಳ್ಳಲು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.
ವಿಚಿತ್ರ ರೂಪದ ಮಗುವನ್ನ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಏಳು ದಿನಗಳ ಕಾಲ ತುರ್ತು ಚಿಕಿತ್ಯ ಘಟಕದಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ.
ಕಳೆದ ವರ್ಷ ಕೂಡಾ ಇದೇ ದಂಪತಿ ಇಂತದ್ದೇ ರೂಪ ಹೊಂದಿದ ಮಗುವಿಗೆ ಜನ್ಮ ನೀಡಿತ್ತು. ನಾಲ್ಕೈದು ದಿನಗಳ ನಂತರ ಮಗು ಸಾವನ್ನಪ್ಪಿತ್ತು.
ಮತ್ತೆ ಇದೇ ರೀತಿ ಮಗು ಜನನವಾಗಿದ್ದು ಇಡೀ ಕುಟುಂಬ ಆತಂಕಕ್ಕೆ ಒಳಗಾಗಿದೆ.
ಈ ಹಿಂದೆ ನಡೆದ ಪ್ರಕರಣದ ನಂತರ ಆರೋಗ್ಯ ಇಲಾಖೆ ನೀಡಿದ್ದ ಸಲಹೆ ಸೂಚನೆಗಳನ್ನ ದಂಪತಿ ಪಾಲಿಸಿಲ್ಲ ಎಂದು ಹೇಳಲಾಗಿದೆ.
ಮಗುವನ್ನ ಉಳಿಸಿಕೊಳ್ಳಲು ಚೆಲುವಾಂಬಾ ಆಸ್ಪತ್ರೆಯ ತುರ್ತು ಘಟಕದಲ್ಲಿ ಹರಸಾಹಸ ನಡೆಸಲಾಗುತ್ತಿದೆ.ಆದರೆ ಈ ವಿಚಿತ್ತ ಮಗು ಬದುಕುವುದೊ ಇಲ್ಲವೊ ಆ ದೇವನಿಗೆ ಗೊತ್ತು.ವಿಚಿತ್ರ ಮಗು ವೈದ್ಯಲೋಕಕ್ಕೆ ಸವಾಲಾಗಿರುವುದಂತೂ ಸತ್ಯ.