ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು; ಜತೆಗೆ ಛಲ‌ ಇರಬೇಕು:ಸಹನಾ

Spread the love

ಮೈಸೂರು: ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅದಕ್ಕೆ‌ ಛಲ‌ ಇರಬೇಕು ಎಂದು ಅಂತರ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಕ್ರೀಡಾಪಟು ಸಹನಾ ತಿಳಿಸಿದರು.

ಪೊಲೀಸ್ ಇಲಾಖೆ ಹಾಗೂ 5ನೇ ಪಡೆ ಕೆ.ಎಸ್.ಆರ್.ಪಿ. ಸಹಯೋಗದಲ್ಲಿ ನಗರದ ಓವೆಲ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳಾ ಪೊಲೀಸ್ ಕ್ರಾಸ್ ಕಂಟ್ರಿ ಕ್ರೀಡೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಿಂದ ಏನು ಮಾಡಲು ಆಗುವುದಿಲ್ಲ ಎಂದು ಕುಳಿತುಕೊಳ್ಳಬಾರದು, ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕು, ಸಾಧನೆ ಮಾಡಲು ನಮಗೆ ದೇಹಾರೋಗ್ಯ ಮುಖ್ಯ ಎಂದು ಕ್ರೀಡಾಪಟುಗಳಿಗೆ ತಿಳಿಹೇಳಿದರು.

ನಮ್ಮ ತಂದೆಯವರು ಸಹ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇಂದು ನಾನು ಒಬ್ಬ ಕ್ರೀಡಾಪಟುವಾಗಿ ಇಂತಹ ಒಂದು ಕ್ರೀಡಾ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಹನಾ ತಿಳಿಸಿದರು.

ಈ ಸಂದರ್ಭದಲ್ಲಿ ಎಸ್ ಪಿ ವಿಷ್ಣುವರ್ಧನ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.