ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ

Spread the love

ನಂಜನಗೂಡು: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯವಾಗಿದೆ ಹಾಗಾಗಿ ಎಲ್ಲ ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ನಂಜನಗೂಡು ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಕರೆ ನೀಡಿದರು.

ನಂಜನಗೂಡು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಧ್ವಜಾರೋಹಣ ಮಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಂ ಎಸ್ ರಾಮಪ್ರಸಾದ್ ಅವರು ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ, ಕ್ರೀಡಾ ಸ್ಪೂರ್ತಿ ಇದ್ದರೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲೂ ಕೂಡಾ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.

ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ ಅವರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋದಿಸಿ ಗೆಲುವು–ಸೋಲು ಸಾಮಾನ್ಯ, ಆದರೆ ಪ್ರತಿಯೊಂದು ಪಂದ್ಯವೂ ಹೊಸ ಪಾಠ ಕಲಿಸುತ್ತದೆ ಎಂದು ತಿಳಿಸಿದರು.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್ ದಿನೇಶ್ ಅವರು ಅಧ್ಯಕ್ಷೀಯ ಭಾಷಣ ಮಾಡಿ,ಕ್ರೀಡೆ ಜೀವನದ ಒಂದು ಅವಿಭಾಜ್ಯ ಅಂಗ. ಕ್ರೀಡಾಂಗಣದಲ್ಲಿ ನೀವು ತೋರಿಸುವ ಪರಿಶ್ರಮ, ಶಿಸ್ತು, ಧೈರ್ಯ ಮತ್ತು ತಂಡಭಾವನೆಗಳು ಜೀವನದಲ್ಲಿಯೂ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ. ಗೆಲುವು–ಸೋಲು ಸಾಮಾನ್ಯ, ಆದರೆ ಪ್ರತಿಯೊಂದು ಪಂದ್ಯವೂ ಹೊಸ ಪಾಠ ಕಲಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಂಜನಗೂಡಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ವ್ಯವಸ್ಥಾಪಕರಾದ ಸಂಜಯ್ ಪಂಗ,ಪ್ರಾಂಶುಪಾಲರಾದ ಚಂದ್ರಶೇಖರಬಾಬು,ಜಾರ್ಜ್,ಕೆಂಡಗಂಡಸ್ವಾಮಿ ,ರೇವಣ್ಣ,ಸೋಮಶೇಕರ್,ಪ್ರವೀಣ್,ನಾಗರಾಜು.ಬಿ.ಎಸ್,ಸರಳ,ಪ್ರಸಾದ್, ಚೆನ್ನಬಸಪ್ಪ ,ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ ನಂಜಪ್ಪ,ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ,ಕ್ರೀಡಾ ಕಾರ್ಯದರ್ಶಿ ಸ್ವಾಮಿ ಗೌಡ, ಟಿ ಕೆ ರವಿ ,ಲೋಕೇಶ್, ವೃಷಭೇಂದ್ರ ಸ್ವಾಮಿ ,ಪ್ರಕಾಶ್,ಅದಿಲ್,ಇಂದ್ರ,ಮಹದೇವಯ್ಯ,ಮಾಲತಿ ಮುಂತಾದವರು ಉಪಸ್ಥಿತರಿದ್ದರು.