ನಟ ವಸಿಷ್ಠಸಿಂಹ, ಹರಿಪ್ರಿಯ ದಂಪತಿಗೆ ವಿಶೇಷ ನೋಟಿನ ಹೂಗುಚ್ಛದ ಸ್ವಾಗತ

Spread the love

ಮೈಸೂರು: ಪುತ್ರನ ಮುಡಿ ಶಾಸ್ತ್ರದ ಹಿನ್ನಲೆಯಲ್ಲಿ, ನಂಜುಂಡೇಶ್ವರ ಸ್ವಾಮಿಯ ದರ್ಶನ ಪಡೆಯಲು ಶುಕ್ರವಾರ ದಕ್ಷಿಣ ಕಾಶಿ ನಂಜನಗೂಡಿಗೆ ಆಗಮಿಸಿದ ಸ್ಯಾಂಡಲ್‌ವುಡ್ ನಟ ವಸಿಷ್ಠಸಿಂಹ, ಹರಿಪ್ರಿಯ ದಂಪತಿಗೆ ಕೆಎಂಪಿಕೆ ಟ್ರಸ್ಟ್ ವತಿಯಿಂದ ವಿಶೇಷ ನೋಟಿನ ಹೂಗುಚ್ಛದ ಸ್ವಾಗತ ನೀಡಲಾಯಿತು.

ವಿವಿಧ ನೋಟುಗಳಿಂದ ಸಿದ್ದಪಡಿಸಿದ ವಿಶೇಷ ಹೂಗುಚ್ಛವನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಕಡಕೋಳ ಜಗದೀಶ್,ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು,ಸಚಿನ್ ನಾಯಕ್ ಮಹಾನ್ ಶ್ರೇಯಸ್ ,ಅಮಿತ್ ಹಾಗೂ ಅಭಿಮಾನಿಗಳು ಹಾಜರಿದ್ದರು.