ಸರ್ವೇಷಾಮೇಕಾದಶಿ:ಮೃತ್ಯುಂಜಯೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಮೈಸೂರು,ಡಿ.1: ಮೈಸೂರಿನ ಅಗ್ರಹಾರ ಕೆ.ಆರ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಮೃತ್ಯುಂಜಯೇಶ್ವರ ಸ್ವಾಮಿ ದೇವಾಲಯದಲ್ಲಿ ಮಾರ್ಗಶಿರ ಶುಕ್ಲ ಏಕಾದಶಿ
ಪ್ರಯುಕ್ತ ‌ಶ್ರೀ‌ ಸ್ವಾಮಿಗೆ ವಿಶೇಷ ಪೂಜೆ
ಹಮ್ಮಿಕೊಳ್ಳಲಾಯಿತು.

ಇಂದು ಸೋಮವಾರ ಸರ್ವೇಷಾಮೇಕಾದಶಿ,ಗೀತಾಜಯಂತಿ ಕೂಡಾ ಇರುವುದರಿಂದ ಮುಂಜಾನೆಯೇ ಮೃತ್ಯುಂಜಯೇಶ್ವರ ಸ್ವಾಮಿಗೆ
ಪಂಚಾಮೃತ ಹಾಗೂ ಕ್ಷೀರಾಭಿಷೇಕ ಮಾಡಿ‌ ಪೂಜೆ ಸಲ್ಲಿಸಲಾಯಿತು.

ಮೃತ್ಯುಂಜಯೇಶ್ವರನಿಗೆ ಬೆಳ್ಳಿ ಮುಖವಾಡ ಧರಿಸಿ ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ತುಳಸಿ,ಗುಲಾಬಿ ಸುಗಂದರಾಜ ಸೇರಿದಂತೆ ಅನೇಕ ಹೂಗಳಿಂದ ವಿಶೇಷವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.

ಇದೇ‌ ವೇಳೆ‌ ಶಿವಲಿಂಗುವಿಗೂ ಹೂಗಳನ್ನು ಧರಿಸಿ ಪೂಜಿಸಿದ್ದು ನೋಡಲು ಎರಡು ಕಣ್ಣುಗಳು ಸಾಲದು.

ಶಿವಾರ್ಚಕರಾದ ಎಸ್.ಯೋಗಾನಂದ್ ಅವರ ಪುತ್ರ ಅಭಿನಂದನ್ ಅವರು ಮೃತ್ಯುಂಜಯೇಶ್ವರನಿಗೆ‌ ವಿವಿಧ‌ ಆರತಿಗಳನ್ನು ಮಾಡಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಭಕ್ತರಿಗೆ ಮಹಾಮಂಗಳಾರತಿ ನೀಡಿ ಪ್ರಸಾದ‌ ವಿನಿಯೋಗ ಮಾಡಲಾಯಿತು.