ರೈತರ ಮಕ್ಕಳಿಗೆ ಉದ್ಯೋಗ: ವಿಶೇಷ ಭೂಸ್ವಾದೀನಾಧಿಕಾರಿಗೆ ಮನವಿ

Spread the love

ಮೈಸೂರು,ಏ.4:ಜಿಲ್ಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ನೀಡುವಂತೆ ವಿಶೇಷ ಭೂಸ್ವಾದೀನಾಧಿಕಾರಿ ವೆಂಕಟರಾಜು ರವರಿಗೆ ಜಿಲ್ಲಾ ಕಾರ್ಮಿಕ ವಿಭಾಗದ ಕಾರ್ಯಾಧ್ಯಕ್ಷ ಭರತ್ ನೇತೃತ್ವದ ನಿಯೋಗ ಮನವಿ ಮಾಡಿತು.

ಮೈಸೂರು ಜಿಲ್ಲೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ರೈತ ಕುಟುಂಬದವರಿಗೆ ಉದ್ಯೋಗ ದೊರಕಿಸಿಕೊಡಿ ರೈತರು ಪದೇ ಪದೇ ನಿಮ್ಮ ಕಚೇರಿಗೆ ಅಲೆಯದಂತೆ ನೋಡಿಕೊಳ್ಳಿ ಎಂದು ಮೈಸೂರು ಜಿಲ್ಲಾ ಕಾರ್ಮಿಕ ವಿಭಾಗದ ಕಾರ್ಯಧ್ಯಕ್ಷ ಭರತ್, ಕಡಕೋಳದ ರವಿ, ಕೆಎಂ ಹುಂಡಿ ಮಹೇಶ್ ಹಾಗೂ ಕಡಕೋಳದ ಮುಖಂಡರು ವಿಶೇಷ ಭೂಸ್ವಾದಾಧಿಕಾರಿ ಡಾ. ಎನ್ ಸಿ ವೆಂಕಟರಾಜು ಅವರನ್ನು ಭೇಟಿ ಮಾಡಿ ಅಭಿನಂದಿಸಿ ಮನವಿ ಸಲ್ಲಿಸಿದರು.

ನಮ್ಮ ಜಿಲ್ಲಾ ವ್ಯಾಪ್ತಿಗೆ ಬರುವ ಕಡಕೋಳ ಕೈಗಾರಿಕಾ ಪ್ರದೇಶ, ತಾಂಡವಪುರ ಕೈಗಾರಿಕಾ ಪ್ರದೇಶ, ಅಡಕನಹಳ್ಳಿ ಕೈಗಾರಿಕಾ ಪ್ರದೇಶ, ಇಮ್ಮಾವು ಕೈಗಾರಿಕಾ ಪ್ರವೇಶ ಸೇರಿದಂತೆ ಜಿಲ್ಲೆಯಲ್ಲಿ ಬರುವ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ತಾವು ಖುದ್ದಾಗಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಕಂಪನಿಗಳಲ್ಲಿ ಉದ್ಯೋಗ ಹಿಡಿದ ಮೇಲೆ ಖಾಯಂ ಉದ್ಯೋಗ ಕೊಡುವಂತಾಗಬೇಕು ಯಾವುದೇ ಕಾರಣಕ್ಕೂ ಭೂಮಿ ಕಳೆದುಕೊಂಡ ರೈತ ಕುಟುಂಬದವರು ಪದೇ ಪದೇ ನಿಮ್ಮ ಕಚೇರಿಗೆ ಬರದಂತೆ ನೋಡಿಕೊಳ್ಳಿ ಹಾಗೂ ಭೂಮಿ ಕಳೆದುಕೊಂಡ ರೈತರಿಗೆ ಉತ್ತಮ ಭೂ ಪರಿಹಾರವನ್ನು ದೊರಕಿಸಿಕೊಡಿ ಎಂದು ಮನವಿ ಮಾಡಿದರು.