ಮೈಸೂರು: ಯುಗಾದಿ ಹಬ್ಬದ ಅಂಗವಾಗಿ ಇರ್ವಿನ್ ರಸ್ತೆಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹೋಮ ಮತ್ತಿತರ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.

ಶ್ರೀ ಸ್ವಾಮಿಗೆ ತೈಲಾಭಿಷೇಕ, ವಿಶೇಷ ಧ್ರವ್ಯಗಳು ಹಾಗೂ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಪಂಚಾಂಗ ಶ್ರಾವಣ ಪಠಿಸುವ ಮೂಲಕ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರಿದವು.
ನಂತರ ಭಕ್ತಾದಿಗಳಿಗೆ ಬೇವು-ಬೆಲ್ಲ ಹಾಗೂ ಪ್ರಸಾದ ವಿತರಿಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಕುಟುಂಬ ಸಮೇತ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದುದು ವಿಶೇಷ.
