ಕೆ ಎಮ್ ಇಂದ್ರ,ಡಾ ಜಾನಪದ ಎಸ್ ಬಾಲಾಜಿ ಅವರಿಗೆ ಆತ್ಮೀಯ ಸನ್ಮಾನ

Spread the love

ಬೆಂಗಳೂರು: ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಪ್ರಾರಂಭವಾಗಿದ್ದ ಶಾಲೆ ಸುವ್ವಾಲಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು ಅನೇಕ ಗಣ್ಯರ ಸಮ್ಮುಖದಲ್ಲಿ ವಿಶೇಷವಾಗಿ ಸಂಪನ್ನಗೊಂಡಿತು.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರ ಮಠದ ಸಭಾಭವನದಲ್ಲಿ ನಡೆದ ಶಾಲೆ ಸುವ್ವಾಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕರು ಕೆ ಎಮ್ ಇಂದ್ರ ಹಾಗೂ ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಸನ್ಮಾನಿಸಿ ಆತ್ಮೀಯವಾಗಿ ಗೌರವಿಸಲಾಯಿತು.

ಚಲನಚಿತ್ರ ನಿರ್ದೇಶಕ ಹಾಗೂ ನಟರಾದ ಎಸ್. ನಾರಾಯಣ್, ಅಂತರಾಷ್ಟ್ರೀಯ ಜನಪದ ಗಾಯಕ ಡಾ. ಅಪ್ಪುಗೆರೆ ತಿಮ್ಮರಾಜು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎಮ್ ಶಿವರಾಜು,ಬಿಬಿಎಂಪಿ ಮಾಜಿ ಸದಸ್ಯರಾದ ಕೇಶವಮೂರ್ತಿ, ಮೋಹನ್ ಕುಮಾರ್, ಅನುಪಮಾ ಸಂಸ್ಥೆಯ ಕಾರ್ಯದರ್ಶಿ ಯೋಗೇಶ್ ನಾಗರಾಜ್, ಆರ್ ಸುಧೀಂದ್ರ ಆಚಾರ್, ಜನಪದ ಗಂಗಣ್ಣ ಹಾಗೂ ನೆಲಸಗೂಡು ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.