ಮೈಸೂರು: ಹುಲ್ಲಿನ ಮೆದೆಯೊಳಗೆ ಅಡಗಿದ್ದ ಭಾರಿ ಗಾತ್ರದ ಹೆಬ್ಬಾವನ್ನ ಉರಗ ತಜ್ಞ ಸ್ನೇಕ್ ಶ್ಯಾಮ್ ರಕ್ಷಿಸಿದ್ದಾರೆ.
ಮೈಸೂರು ತಾಲೂಕು ಮೈದುನ ಹಳ್ಳಿಯ ಪ್ರಸನ್ನ ಎಂಬುವರ ಮನೆ ಬಳಿ ಇದ್ದ ಹುಲ್ಲಿನ ಮೆದೆಯೊಳಗೆ ಹೆಬ್ಬಾವು ಅಡಗಿತ್ತು.
ಹಾವಿನ ತಲೆ ಕಾಣಿಸಿದ ಕೂಡಲೇ
ಬೆಚ್ಚಿ ಬಿದ್ದ ಗ್ರಾಮದ ಜನ ಸ್ನೇಕ್ ಶ್ಯಾಮ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಮೈದುನಹಳ್ಳಿಗೆ ದಾವಿಸಿದ ಸ್ನೇಕ್ ಶ್ಯಾಮ್ ಅವರು ಹುಲ್ಲಿನ ಮೆದೆಯೊಳಗೆ ಅವಿತಿದ್ದ ಸುಮಾರು ೧೦ ಅಡಿ ಉದ್ದದ ಹೆಬ್ಬಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.