ಮೈಸೂರು: ದಸರಾ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಅಗ್ರಹಾರದ ನವಗ್ರಹ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತಿದೆ.
ನಗರದ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ನವರಾತ್ರಿಯ ವಿಶೇಷ ಪೂಜಾಕಾರ್ಯಗಳು ನೆರವೇರುತ್ತಿದೆ.
ಶಿವಾರ್ಚಕರಾದ ಎಸ್.ಯೋಗಾನಂದ ಅವರ ಪುತ್ರ ಅಭಿನಂದನ್ ಅವರು ತಾಯಿ ಪಾರ್ವತಿಗೆ ವಿಶೇಷ ಅಲಂಕಾರಗಳನ್ನು ಮಾಡುತ್ತಿದ್ದಾರೆ.
ನವರಾತ್ರಿ ಐದನೆ ದಿನವಾದ ಶುಕ್ರವಾರ ತಾಯಿ ಸ್ಕಂದಮಾತಾ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ಚೆಂದದ ಅಲಂಕಾರ ಮಾಡಿದ್ದಾರೆ ಅಭಿನಂದನ್.
ದೇವಿಯು ಹಸಿರು ಬಣ್ಣದಲ್ಲಿ ವನಮಾತೆಯಂತೆ ಕಾಣುತ್ತಿದ್ದಾಳೆ. ತಾಯಿ ಪಾರ್ವತಿಗೆ ವಿವಿಧ ಹೂಗಳು, ಆಭರಣಗಳಿಂದ ಅಲಂಕರಿಸಲಾಗಿದೆ.

ಸ್ಕಂದ ಎಂದರೆ ಸುಬ್ರಮಣ್ಯ,ಸ್ಕಂದನ ಮಾತೆ ಇಡೀ ಜಗತ್ತಿಗೆ ಮಾತೃ ಸ್ವರೂಪಿಣಿಯಾಗಿದ್ದಾಳೆ.
ಜತೆಗೆ ಬೆಳ್ಳಿಯ ಕೈಗಳು ಮತ್ತು ತ್ರಿಶೂಲಧಾರಿಯಾಗಿ ಮನಸಿಗೆ ತಂಪು ನೀಡುತ್ತಿರುವಂತೆ ಕಾಣುತ್ತಾಳೆ.ನೂರಾರು ಭಕ್ತರು ಆಗಮಿಸಿ ತಾಯಿಯ ದರ್ಶನ ಪಡೆದು ಮಂಗಳಾರತಿ ತೆಗೆದುಕೊಂಡು ಪ್ರಸಾದ ಸ್ವೀಕರಿಸಿದರು.