ಮೈಸೂರು: ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಧರ್ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಸಿಂಗರಿಶೆಟ್ಟಿ ಕೊಳ ಕಲ್ಯಾಣಿ ಪುನರುಜ್ಜೀವನ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರು.
ನಗರದ ರಾಜೇಂದ್ರ ನಗರ ಮುಖ್ಯ ರಸ್ತೆಯಲ್ಲಿರುವ ಶತಮಾನದ ಇತಿಹಾಸ ಇರುವ ಮಂಟಪ ಮತ್ತು ಕಲ್ಯಾಣಿ ಇರುವ ಬಗ್ಗೆ ಮಾಹಿತಿ ಇದ್ದು ದೇವಸ್ಥಾನ ಮತ್ತು ಕಲ್ಯಾಣಿಯನ್ನು ಸ್ವಚ್ಚತೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂಬಂಧ ನಗರಪಾಲಿಕೆ ಮತ್ತು ಮೂಡ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ಈ ಸ್ಥಳದಲ್ಲಿ ಅನಧಿಕೃತವಾಗಿ ಶಡ್ ಮಾದರಿ ಅಂಗಡಿಗಳು ನಿರ್ಮಾಣ ಆಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಇದೇ ವೇಳೆ ಸ್ಥಳ ವೀಕ್ಷಣೆ ಮಾಡಿ ಗಿರಿಧರ್ ಅವರು ಮಾತನಾಡಿ,
ಫೌಂಟನ್ ವೃತ್ತದಿಂದ ರಾಜೇಂದ್ರ ನಗರಕ್ಕೆ ಹೋಗುವ ರಸ್ತೆಯಲ್ಲಿ ಒಂದು ಪಶು ಆಸ್ಪತ್ರೆ ಇದ್ದು. ಅದರ ಎದುರು ಪುರಾತನವಾದ ಮಂಟಪವಿದೆ,ಅದರ ಜೊತೆಯಲ್ಲಿ ಒಂದು ಕಲ್ಯಾಣಿಯೂ ಇದ್ದು ಅದನ್ನು ಮುಚ್ಚಲಾಗಿದೆ ಎಂದು ತಿಳಿಸಿದರು.
ಆ ಕಲ್ಯಾಣಿಯನ್ನ ಸಿಂಗರ ಶೆಟ್ಟಿ ಕೊಳ ಎಂದು ಕರೆಯಲ್ಪಡುತಿತ್ತು. ಇಲ್ಲಿಂದ ದೇವರ ಪೂಜೆಗೆಂದು ಶಿವಾಜಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.
ಈಗ ಕೊಳವನ್ನು ಮುಚ್ಚಿ ಮಂಟಪದ ಸುತ್ತ ಮುತ್ತ ಮೀನು ಮತ್ತು ಮಾಂಸದ ಅಂಗಡಿಗಳನ್ನು ಅನಧಿಕೃತವಾಗಿ ಇಟ್ಟು ಅದನ್ನು ಅಪವಿತ್ರಗೊಳಿಸಲಾಗುತ್ತಿದೆ ಎಂದು ಗಿರಿಧರ್ ಗಂಭೀರ ಆರೋಪ ಮಾಡಿದರು.
ಆ ಮಂಟಪದ ಸುತ್ತ ಮುತ್ತ ಇರುವ ಅಂಗಡಿಗಳನ್ನು ಖಾಲಿ ಮಾಡಿಸಿ. ಹಿಂದುಗಳ ಪವಿತ್ರವಾಗಿರುವ ಮಂಟಪವನ್ನು ಸ್ವಚ್ಚಗೋಳಿಸಬೇಕು ಇಲ್ಲದಿದ್ದರೆ ಮುಂದಿನ ವಾರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈಗಾಗಲೇ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದೇವೆ ಆದ್ದರಿಂದ ಸದರಿ ಸ್ಥಳವನ್ನು ಪರಿಶೀಲನೆ ಮಾಡಲು ಬಂದಿದ್ದೆವು ಆದರೆ ಸ್ಥಳೀಯ ಜನರು ವಿರೋಧ ಮಾಡಿದ್ದಾರೆ. ಇದು ನಮ್ಮ ಅಸ್ಮಿತೆ, ಈ ಜಾಗವನ್ನು ಪುನರುಜ್ಜೀವನ ಮಾಡಿ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಎನ್ ಆರ್ ಮೊಹಲ್ಲಾ ಸಿಂಗ್ರಿ ಶೆಟ್ಟಿ ಕಲ್ಯಾಣಿ ಹಾಗೂ ಮಂಟಪ ಉಳಿವಿಗಾಗಿ ಪರಿಶೀಲನೆಗೆ ಹೋದಾಗ ಚಕಮಕಿ ಕೂಡಾ ನಡೆದಿದೆ.

ಪ್ರತಿಭಟನೆ ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಗಿರಿಧರ್ ನೇತೃತ್ವದಲ್ಲಿ ನಡೆಯಿತು.
ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾದ ಮಂಜುನಾಥ್ , ಮುಖಂಡರಾದ ಮುರುಳಿ , ಕಾರ್ತಿಕ್ ಮರಿಯಪ್ಪ, ಪುನೀತ್,ಲಕ್ಷ್ಮಣ್ ,ಮಣಿರತ್ನಂ, ಕೃಷ್ಣಮೂರ್ತಿ ರಾವತ್,ಜಗದೀಶ್ ,ಶಾಂತರಾಜ್,ತಂಬಿ,ಮಹದೇವು,ವೇಲು,ನಾಗರಾಜ್ ,ಜಗದೀಶ್ ,ನವೀನ್ ಶೆಟ್ಟಿ ಹಾಗೂ ಸಮಾಜದ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.