ಮೈಸೂರು: ಮೈಸೂರಿನ ಅಗ್ರಹಾರ ದಲ್ಲಿರುವ ಶ್ರೀ ಕಾಮಕಾಮೇಶ್ವರಿ
ದೇವಸ್ಥಾನದ ಬಳಿ ಶ್ರೀ ಶಿಲ್ಪಿ ಸಿದ್ದಲಿಂಗ ಸ್ವಾಮಿಗಳವರ 140 ನೇ ಜನ್ಮ ಶತಮಾನೋತ್ಸವ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕನ್ನಡ ಕ್ರಾಂತಿದಳದ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಅವರು ಶ್ರೀ ಸಿದ್ದಲಿಂಗ ಸ್ವಾಮಿ ಗಳವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ತೇಜಸ್ವಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಡಾ. ಅನುಪಮ, ಗೋಲ್ಡನ್ ಸುರೇಶ್, ಪ್ರಮೀಳಾ, ವೀರಶೈವ ಮೂರ್ತಿ, ಕಮಲಾ ಸ್ವಾಮಿ, ಲೀಲಾ ನಂಜುಂಡ ಸ್ವಾಮಿ, ರಮೇಶ್, ಮಂಜುನಾಥ ಆಚಾರ್ಯ, ಹಾಗೂ ಗುರುಕುಲ ಕುಟುಂಬ ಸದಸ್ಯರಿಗೆ ಧನ್ಯವಾದ ತಿಳಿಸಿದರು.
