ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿ ಚಿರತೆ ಕಾಣಿಸಿಕೊಂಡಿದ್ದು,ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಈ ವಿಷಯ ಹರಡುತ್ತಿದ್ದಂತೆ ಜನ ಗಾಬರಿಗೊಂಡಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಹತ್ತಿರ ಇರುವ ಕೆಸಿ ಲೇಔಟ್,ಸಕ್ಕಳ್ಳಿ ಮತ್ತಿತರ ಹತ್ತಿರದ ಪ್ರದೇಶದಲ್ಲಿ ಚಿರತೆ ಕಾಣಿಸುವುದು ಸಾಮಾನ್ಯವಾಗಿತ್ತು.ಒಮ್ಮೆ ಲಲಿತಮಹಲ್ ಗೇಟ್ ತನಕ ಬಂದ ಉದಾಹರಣೆಯೂ ಇದೆ.
ಆದರೆ ಈಗ ಚಿರತೆ ಸಿದ್ದಾರ್ಥ ಬಡಾವಣೆಯ ಒಳಗೇ ಬಂದಿದೆ.ಮನೆಗಳ ಮುಂದೆಯೇ ನಿಧಾನವಾಗಿ ಸಂಚರಿಸಿದೆ.ಈ ದೃಶ್ಯ ವೈರಲ್ ಆಗಿದೆ ಹಾಗಾಗಿ ಜನತೆ ಆತಂಕಗೊಂಡಿದ್ದಾರೆ.
ಆದರೆ ಇದು ಸಿದ್ದಾರ್ಥ ಬಡಾವಣೆಯೇ ಎಂಬುದನ್ನು ಖಚಿತವಾಗಿ ಯಾರೂ ಹೇಳಿಲ್ಲ.ಎಲ್ಲಾ ಅಂತೆ ಕಂತೆ.
ಇದೆಲ್ಲಾ ಏನೇ ಇರಲಿ ಜನ ಆತಂಕ ಗೊಂಡಿರುವುದಂತೂ ಸತ್ಯ.ತಕ್ಷಣ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸಿದ್ದಾರೆ.
