ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಬ್ಬದ ಸಡಗರ ಮನೆ ಮನೆ ಮಾಡಿತ್ತು.

ಅದೇನಂತೀರಾ..ಪ್ರತಿವರ್ಷದಂತೆ ಈ ಬಾರಿಯೂ ಕಾಲೇಜಿನಲ್ಲಿ ಹಳ್ಳಿಹಬ್ಬ ಹಮ್ಮಿಕೊಳ್ಳಲಾಗಿತ್ತು.

ವಿದ್ಯಾರ್ಥಿಗಳು ಸಡಗರ,ಸಂಭ್ರಮದಿಂದ ತಮ್ಮ ಮನೆಯಲ್ಲಿ ನಡೆಯುವ ಹಬ್ಬವೇನೋ ಎಂಬಂತೆ ಖುಷಿಯಿಂದ ಪಾಲ್ಗೊಂಡಿದ್ದರು.
ಕಾಲೇಜಿನ ಬಿಕಾಂ,ಬಿಎ,ಬಿಎಸ್ ಸಿ,ಬಿಬಿಎ ಇತ್ಯಾದಿ ವಿಭಾಗಗಳ ವಿದ್ಯಾರ್ಥಿಗಳು ತಮ್ಮ,ತಮ್ಮ ತರಗತಿಗಳಲ್ಲಿ ವಿವಿಧ ಹಬ್ಬಗಳನ್ನು ಹಮ್ಮಿಕೊಂಡಿದ್ದರು.
ಬಿಕಾಂ ಅಂತಿಮ ವಿದ್ಯಾರ್ಥಿಗಳು ಹುಲಿಯ ವಾಹನದ ಮೇಲೆ ಮಲೆ ಮಹದೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಿ ಪೂಜಿಸಿದರು.

ಇದೇ ವೇಳೆ ವಿದ್ಯಾರ್ಥಿನಿಯರು ಜಾಕಿಕ್ವಾರ್ಟಸ್ ವೃತ್ತದಲ್ಲಿರುವ ಮಹದೇಶ್ವರ ಸ್ವಾಮಿ ದೇವಸ್ಥಾನದಿಂದ ಕಾಲೇಜಿನ ತನಕ ಕಲಶ ಹೊತ್ತು ಸಾಗಿ ಬಂದರು.

ಈ ಸಂದರ್ಭದಲ್ಲಿ ಕಾಲೇಜಿನ ಇತರೆ ವಿಭಾಗದವರು ಸಂಕ್ರಾಂತಿ ಹಬ್ಬ, ಚಾಮುಂಡೇಶ್ವರಿ,ಯುಗಾದಿ,
ದಸರಾ,ಗೌರಿ-ಗಣೇಶ,ಮಾರಿಹಬ್ಬ ಗಳನ್ನು ಆಚರಿಸಿದರು.

ಇದೇ ವೇಳೆ ಇಡೀ ಕಾಲೇಜಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಕಂಸಾಳೆ ಕುಣಿತ,ಡೊಳ್ಳು ಕುಣಿತ,
ಹುಲಿವೇಶ,ವೀರಗಾಸೆ ಮತ್ತಿತರ ಜಾನಪದ ಕಲಾತಂಡಗಳು ಮೆರಗು ನೀಡಿದವು.
