ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪಂಚವಟಿ ಶ್ರೀ ಸೀರಾರಾಮ ದೇವಾಲಯದಲ್ಲಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಯಿತು.
ಸಂಜೆ ಶ್ರೀರಾಮ ಸೀತಾ ಮಾತಾ ಲಕ್ಷ್ಮಣ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ ನೆರವೇರಿಸಿ ನಂತರ ವಿಧ ವಿಧವಾದ ಹೂಗಳಿಂದ ಅಲಂಕರಿಸಲಾಗಿತ್ತು.

ನಂತರ ವೈಕುಂಠ ದ್ವಾರ ತೆರೆದು ನೂರಾರು ಭಕ್ತರು ವೈಕುಂಠ ದ್ವಾರ ಪ್ರವೇಶ ಮಾಡಿ ಪುನೀತರಾದರು.
ಬೇರೆ ಬೇರೆ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿಯಂದು ವೈಕುಂಠ ದ್ವಾರ ಪ್ರವೇಶ ಇದ್ದರೆ ಇಲ್ಲಿನ ಶ್ರೀರಾಮ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬದ ದಿನದಂದೇ ವೈಕುಂಠ ದ್ವಾರ ಪ್ರವೇಶ ಇರುವುದು ವಿಶೇಷ.

ದೇವಾಲಯದಲ್ಲಿರುವ ಶ್ರೀ ಗಣಪತಿ,ನವಗ್ರಹ ದೇವರುಗಳಿಗೆ ಅಲಂಕಾರ ಮಾಡಿ ಪೂಜಿಸಲಾಯಿತು.

ಇದೇ ವೇಳೆ ದೇವಲಯದ ಆವರಣದಲ್ಲಿ ಸೀತಾರಾಮ ಉತ್ಸವ ಮೂರ್ತಿಯನ್ನು ಉಯ್ಯಾಲೆಯಲ್ಲಿ ಪ್ರತಿಷ್ಟಾಪಿಸಿ ಭಕ್ತರು ತೂಗುವ ಮೂಲಕ ಉಯ್ಯಾಲೋತ್ಸವ ನೆರವೇರಿಸಿದ್ದು ವಿಶೇಷವಾಗಿತ್ತು.

ಪುರೋಹಿತ್ ಅರುಣ್ ಅವರ ನೇತೃತ್ವದಲ್ಲಿ ಎಲ್ಲಾ ಪೂಜಾ ಕಾರ್ಯಗಳು ನೆರವೇರಿದವು.
ನಂತರ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗವನ್ನು ದೇವಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.