ಮೈಸೂರು: ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಬನ್ನಿಕಾಳಮ್ಮ ದೇವಾಲಯದ ಆವರಣದಲ್ಲಿರುವ ಮಾದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.

ಹುಲಿಯ ಮೇಲೆ ಕುಳಿತಿರುವ ಮಹದೇಶ್ವರ ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ಶಿವಲಿಂಗು ಮತ್ತು ಆವರಣವನ್ನು ಹೂವಿನಿಂದ ಭವ್ಯವಾಗಿ ಅಲಂಕರಿಸಲಾಗಿತ್ತು.
ಮಹಾಶಿವರಾತ್ರಿ ಪ್ರಯುಕ್ತ ಇಂದು ಮುಂಜಾನೆಯಿಂದಲೇ ಮಾದೇಶ್ವರನಿಗೆ ಅಭಿಷೇಕಗಳನ್ನು ನೆರವೇರಿಸಿ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಯಿತು. ಭಕ್ತಾದಿಗಳಿಗೆ ಮಹಾಮಂಗಳಾರತಿ ಮಾಡಿ ಪ್ರಸಾದ ನಿಯೋಗ ಮಾಡಲಾಯಿತು.

ಮಹಾಶಿವರಾತ್ರಿ ಹಬ್ಬ ವಾದುದರಿಂದ ದೇವಾಲಯದ ಆವರಣದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುರುವಾರ ಮುಂಜಾನೆವರೆಗೂ ಮಾದೇಶ್ವರನಿಗೆ ವಿಶೇಷ ಪೂಜೆಗಳು ನೆರವೇರುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕರಾದ ಮಹೇಶ್ ಅವರು ವರ್ಷಿಣಿ ನ್ಯೂಸ್ ಗೆ ತಿಳಿಸಿದರು.

ಅರ್ಚಕ ಮಹೇಶ್ ಅವರಿಗೆ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಾದ ನಾಗಯ್ಯ ಶಿವಳ್ಳಿಮಠ್ ಮತ್ತು ದೀಕ್ಷಿತ್ ಅವರು ಪೂಜಾ ಕೈಂಕರ್ಯಗಳಲ್ಲಿ ನೆರವಾಗಿದ್ದಾರೆ.
ಇದೆ ವೇಳೆ ಬನ್ನಿ ಕಾಳಮ್ಮ ದೇವಿಗೆ ರೇಷ್ಮೆ ಸೀರೆ ಉಡಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.
