ಮೈಸೂರು: ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್ ಶ್ರೀವತ್ಸ ಅವರು ಅಗ್ರಹಾರದಲ್ಲಿ ನೂತನ ಶಾಸಕರ ಕಚೇರಿ ಕರ್ತವ್ಯ ಭವನ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಅವರನ್ನು ಬ್ರಾಹ್ಮಣ ಸಂಘಟನೆಯವರು ಗೌರವಿಸಿ ಶುಭ ಹಾರಿಸಿದರು.
ಕಾರ್ಯಕ್ರಮದಲ್ಲಿ ಟಿ ಎಸ್ ಶ್ರೀವತ್ಸ ಅವರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರು ಹಾಗೂ
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ನೇತೃತ್ವದಲ್ಲಿ ಅಡಿಗೆ ಗುತ್ತಿಗೆದಾರರಾದ ಹೆಚ್ ಎಸ್. ಪ್ರಶಾಂತ್ ತಾತಾಚಾರ್ (ಕಣ್ಣ), ಚಕ್ರಪಾಣಿ, ಮತ್ತಿತರರು ಶ್ರೀ ರಾಮಾನುಜಾಚಾರ್ಯರ ಭಾವಚಿತ್ರ ನೀಡಿ ಶುಭ ಹಾರೈಸಿದರು.
