ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ: ಟಿ ಎಸ್ ಶ್ರೀವತ್ಸ

Spread the love

ಮೈಸೂರು: ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ, ವಿಶ್ವಭಾಷೆ ಸಂಗೀತವನ್ನರಿತವರು ಆನಂದದಿಂದ ಇರುವರು ಎಂದು ಶಾಸಕ ಟಿ ಎಸ್ ಶ್ರೀವತ್ಸ
ಹೇಳಿದರು.

ನಗರದ ಹೂಟಗಳ್ಳಿ ಬಿ ಎನ್ ರಾವ್ ಸಭಾಂಗಣದಲ್ಲಿ ಕಲಾಭೂಮಿ ವತಿಯಿಂದ ಹಮ್ಮಿಕೊಂಡಿದ್ದ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲರೂ ಸಂಗೀತ ಕಲಿತು ಆಸ್ವಾದಿಸಬೇಕು ಎಂದು ಸಲಹೆ ನೀಡಿದರು.

ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು, ಇದಕ್ಕೆ ಸಂಗೀತದ ಶಕ್ತಿಯೇ ಕಾರಣ. ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ,ಶಂಖನಾದ ಶಾಸ್ವಕೋಶ ಶುದ್ಧಿ ಮಾಡುತ್ತದೆ ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ. ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ ಹಿಂದೂಸ್ತಾನಿ ಕರ್ನಾಟಿಕ್ ಸಂಗೀತಕ್ಕೆ ವಿದೇಶಗಳಲ್ಲಿ ಗೌರವವಿದೆ ಎಂದು ಹೇಳಿದರು.

ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಶ್ರೀವತ್ಸ ಹೇಳಿದರು.

ಸಂಗೀತ ನಿರ್ದೇಶಕರಾದ ಲಯ ಕೋಕಿಲ ಮಾತನಾಡಿ, ಯಾವುದೇ ಕಲೆಯ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಮುನ್ನ ಶ್ರದ್ಧೆ ಮತ್ತು ಛಲದಿಂದ ಅದನ್ನು ಕರಗತ ಮಾಡಿಕೊಳ್ಳಲು ಅವಿರತ ಪ್ರಯತ್ನ ಇರಬೇಕು ಎಂದು ಹೇಳಿದರು

ಕೊರೋಕೆ ಸ್ಪರ್ಧೆಯಲ್ಲಿ 50 ಹೆಚ್ಚು ಮಂದಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ಸ್ವರ ಸಂಭ್ರಮ ಕಾರ್ಯಕ್ರಮದ ಆಯೋಜಕರಾದ ಆಸ್ಕರ್ ಕೃಷ್ಣ, ಗಾಯಕ ನಿಂಗರಾಜು, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ರಕ್ತದಾನ ಮಂಜು , ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಎಸ್ ಇ , ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು,ಸಮೃದ್ಧಿ ವಾರ್ತೆ ಪತ್ರಿಕೆ ಸಂಸ್ಥಾಪಕಿ ಸಹನಾ ಗೌಡ,ಮನೋರೋಗ ತಜ್ಞೆ ಡಾ. ರೇಖಾ ಮನಶಾಂತಿ,
ಉದ್ಯೋಮಿ ರಘುನಂದನ್,ಪ್ರಶಾಂತ್, ಮಂಜುಳಾ, ರುದ್ರೇಗೌಡ, ಚಲನಚಿತ್ರ ನಟಿ ಡಾಕ್ಟರ್ ಶಾಲಿನಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಲ್ತಾನ್, ರಂಗಭೂಮಿ ಕಲಾವಿದೆ ಕಾತ್ಯಾಯಿನಿ ಮತ್ತಿತರರು ಭಾಗವಹಿಸಿದ್ದರು.