ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಗಂಜಾಂ ನಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಮೌಕ್ತಿಕೇಶ್ವರ ಶ್ರೀ ಲಕ್ಷ್ಮೀನಾರಾಯಣ ಸಹಿತ ಶ್ರೀ ನಿಮಿಷಾಂಬಾ ದೇವಿಗೆ ನೂತನ ರಥ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಇಂದು ಸಭೆ ನಡೆಸಲಾಯಿತು.ನಂತರ ರಥ ನಿರ್ಮಾಣ ಕಾರ್ಯ ಎಲ್ಲಿವರೆಗೆ ಬಂದಿದೆ ಎಂಬುದನ್ನು ಪರಿಶೀಲಿಸಿ ತಿಳಿದುಕೊಳ್ಳಲಾಯಿತು.
ಸಭೆಯಲ್ಲಿ ಶ್ರೀ ನಿಮಿಷಾಂಬ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎಸ್ ಎನ್ ದಯಾನಂದ ಹಾಗೂ ಪುರಸಭೆ ಅಧ್ಯಕ್ಷರಾದ ಎಂ.ಎಲ್ ದಿನೇಶ್ ಮತ್ತು ಸಮಿತಿಯ ಸದಸ್ಯರು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು, ರಥ ನಿರ್ಮಾಣದ ಶಿಲ್ಪಿಗಳಾದ ಮಾಲತೇಶ್ ಮತ್ತು ತಂಡದವರು ಭಾಗವಹಿಸಿದ್ದರು.