ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗಜರಾಜನನ್ನು
ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು.

ಗಜರಾಜನಿಗೆ ಮೊದಲು ಶ್ರೀರಂಗನಾಥನ ದರ್ಶನವನ್ನು ಮಾಡಿಸಿ ನಂತರ ಪೂಜೆ ಪುನಸ್ಕಾರಗಳನ್ನು ಮಾಡಿಸಿ ಹಣ್ಣು,ಹಂಪಲು ಕಬ್ಬು ನೀಡಿ ಸಾಮೂಹಿಕವಾಗಿ ಪೂಜೆಯನ್ನು ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಶ್ರೀರಂಗಪಟ್ಟಣದ ಜನತೆ ಹಾಗೂ ಕ್ಷೇತ್ರದ ಶಾಸಕರಾದ ರಮೇಶ್ ಬಾಬು ಬಡ್ಡಿ ಸಿದ್ದೇಗೌಡ ಹಾಗೂ ರಂಗನಾಥ ಸ್ವಾಮಿ ದೇವಸ್ಥಾನದ ಆಡಳಿತ ವರ್ಗದವರು ಗಜರಾಜ ರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.