ಜೆಡಿಎಸ್ ನ ಶ್ರೀನಿವಾಸ್ ಗೌಡ,ಆನಂದ್ ಗೌಡರ ಹುಟ್ಟುಹಬ್ಬ ಆಚರಣೆ

Spread the love

ಮೈಸೂರು: ಜೆಡಿಎಸ್ ಮುಖಂಡ ಶ್ರೀನಿವಾಸ್ ಗೌಡ ಹಾಗೂ
ಜೆಡಿಎಸ್ ಸಮಾಜ ಸೇವಾ ಯುವ ವಿಭಾಗದ ಅಧ್ಯಕ್ಷ ಆನಂದ್ ಗೌಡರ ಹುಟ್ಟುಹಬ್ಬ ವನ್ನು
ಮುಖಂಡರು ಸರಳವಾಗಿ ಆಚರಿಸಿದರು.

ಜೆಡಿಎಸ್ ಮುಖಂಡರು, ಶ್ರೀನಿವಾಸ್ ಗೌಡರು ಮತ್ತು ಆನಂದ್ ಗೌಡರ ಅಭಿಮಾನಿಗಳು, ಜೆಡಿಎಸ್ ಅಭಿಮಾನಿಗಳು ಹುಟ್ಟುಹಬ್ಬ ಆಚರಣೆ ಆಯೋಜಿಸಿದ್ದರು.

ಈ ವೇಳೆ ಇಬ್ಬರ ಕೈನಲ್ಲಿ ಕೇಕ್ ಕತ್ತರಿಸಿ‌ ಎಲ್ಲರಿಗೂ ವಿತರಿಸಿ ಸಂಭ್ರಮಿಸಿದರು.

ನಂತರ‌ ಶ್ರೀನಿವಾಸ್ ಗೌಡರು ಹಾಗೂ ಆನಂದ್ ಗೌಡರಿಗೆ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಎಲ್ಲರೂ ಜನುಮದಿನದ ಶುಭ ಕೋರಿದರು.

ಆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಪ್ರಸನ್ನ, ಪ್ರಕಾಶ್, ಬೆಳ್ಳಯ್ಯ, ಉಮೇಶ್,ಸ್ವಾಮಿ, ರಘು, ರಾಜು, ರಮೇಶ್, ನಿಂಗೇಗೌಡ, ಹೆಚ್ ಡಿ ಕುಮಾರ ಸ್ವಾಮಿ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ರಾಮಕೃಷ್ಣ ಗೌಡ್ರು ನಿರ್ದೇಶಕರಾದ ರತ್ನ ಮತ್ತಿತರರು ಶುಭ‌ಹಾರೈಸಿದರು.