ಮೈಸೂರು: ಮೈಸೂರಿನ ಸಿದ್ಧಾರ್ಥನಗರ,ವಿನಯ ಮಾರ್ಗದಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ವನ್ನು ಜುಲೈ 7 ರಂದು ಹಮ್ಮಿಕೊಳ್ಳಲಾಗಿದೆ.
ಜುಲೈ 5 ರಿಂದಲೇ ಧಾರ್ಮಿಕ ಕಾರ್ಯಗಳು ಪ್ರಾರಂಭವಾಗಿದ್ದು,ಸೋಮವಾರ ಬೆಳಿಗ್ಗೆ ಕಲಶ ಪ್ರತಿಷ್ಟಾಪನೆ, ಮಹಾಕುಂಭಾಭಿಷೇಕ ನೆರವೇರಲಿದೆ.
ಸೋಮವಾರ ಮಧ್ಯಾಹ್ನ 12 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,ಶಾಸಕರಾದ ಟಿ.ಎಸ್.ಶ್ರೀವತ್ಸ,ತನ್ವಿರ್ ಸೇಠ್ ಸೇರಿದಂತೆ ಕಾರಂಜಿ ಮತ್ತು ಸಿದ್ದಾರ್ಥನಗರ ತೆರಿಗೆದಾರರ ಸಂಘದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ರಾಜಗೋಪುರ ಉದ್ಘಾಟನೆ ಪ್ರಯುಕ್ತ ದೇವಾಲಯ ಮತ್ತು ಸಿದ್ದಾರ್ಥ ನಗರದ ಮುಖ್ಯ ರಸ್ತೆಗೆ ಬಣ್ಣ,ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಮಾಡಲಾಗಿದೆ.