ಮೈಸೂರು: ಸರಸ್ವತಿಪುರಂ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಮತ್ತು ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸಾವಿರಾರು ಭಕ್ತರು ಶ್ರೀನಿವಾಸನ ದರ್ಶನ ಪಡೆದು ಪುಲಕಿತರಾದರು,ಗಣ್ಯರು ಸೇರಿದಂತೆ ಸಾವಿರಾರು ಮಂದಿ ಕಲ್ಯಾಣೋತ್ಸವವನ್ನು ಕಣ್ಣು ತುಂಬಿಕೊಂಡು ಲೋಕಪಾಲಕ ಗೋವಿಂದನ ನಾಮಸ್ಮರಣೆ ಮಾಡಿ ಶ್ರೀನಿವಾಸನ ಕೃಪೆಗೆ ಪಾತ್ರರಾದರು.

ನಂತರ ಸೇವಾರ್ಥದಾರರಿಗೆ ತಿರುಪತಿ ಲಾಡು ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿಶಾಸ್ತ್ರಿ, ಪಿ ಎಸ್ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಕೆ ವಿ ಶ್ರೀಧರ್,ಕಿರಣ್ ತಂತ್ರಿ,ಶ್ರೀಕಾಂತ್ ರಾವ್, ಮಿತ್ರ ಮಂಡಳಿ ಅಧ್ಯಕ್ಷರಾದ ಪ್ರವೀಣ್, ಕಾರ್ಯದರ್ಶಿ ರಾಘವೇಂದ್ರ, ಸುಬ್ರಹ್ಮಣ್ಯ ತಂತ್ರಿ,ವಿಜೇಂದ್ರ, ಪದ್ಮನಾಭ ಭಟ್, ಶ್ರೀವತ್ಸ ಮತ್ತಿತರರು ಭಾಗವಹಿಸಿದ್ದರು.