ಮೈಸೂರು: ನಮ್ಮ ದೇಶದ ಪ್ರಸಿದ್ಧ ಸಂತರು, ಮಹಾತಾಯಿ ಆರಾಧಕರು, ಅದ್ವೈತ,ವೇದಾಂತ ಸಿದ್ಧಾಂತವನ್ನು ಎಲ್ಲ ಧರ್ಮಗಳ ಗುರಿಗಳು ಒಂದೇ ಎಂದು ಸಾರಿದವರು ಶ್ರೀ ರಾಮಕೃಷ್ಣ ಪರಮಹಂಸರು
ಎಂದು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಹೇಳಿದರು.
ನಗರದ ರಾಮಕೃಷ್ಣ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಂಡಿದ್ದ
ಭಾರತದ ಜೇಷ್ಠ ಸಂತ ರಾಮಕೃಷ್ಣ ಪರಮಹಂಸರ ಜಯಂತಿ ಅಂಗವಾಗಿ
ರಾಮಕೃಷ್ಣ ಪರಮಹಂಸ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಿ ಮಾತನಾಡಿದ ಅವರು,ಪರಮಹಂಸರ ಜೀವನ ಮತ್ತು ಬೋಧನೆಗಳು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ನಂಬಿಕೆಗಳ ಮೇಲೆ ಅಪಾರವಾದ ಪ್ರಭಾವ ಬೀರಿವೆ ಎಂದು ಹೇಳಿದರು.

ಆಧ್ಯಾತ್ಮಿಕ ಲೋಕದಲ್ಲಿ ತನ್ನನ್ನು ತಾನೇ ಪರೀಕ್ಷೆಗೊಳಪಡಿಸಿಕೊಂಡು ಹಿಂದು ಧರ್ಮವನ್ನು ಉನ್ನತಮಟ್ಟಕ್ಕೆ ಕೊಂಡೊಯ್ದವರು ಶ್ರೀ ಸ್ವಾಮಿ ವಿವೇಕಾನಂದರು. ಅಂತಹವರಿಗೆ ಗುರುವರ್ಯರಾಗಿದ್ದರು ಶ್ರೀ ರಾಮಕೃಷ್ಣ ಪರಮಹಂಸರು ಎಂದು ಬಣ್ಣಿಸಿದರು.
ವಿವೇಕಾನಂದನಗರ, ರಾಮಕೃಷ್ಣನಗರದ ವೃತ್ತಗಳಲ್ಲಿರುವಂತೆ ಶಾರದಾದೇವಿನಗರದಲ್ಲಿಯೂ ಶಾರದಾಮಾತೆಯ ಪ್ರತಿಮೆ ನಿರ್ಮಾಣವಾಗಬೇಕು,ಆಗ ಈ ಮೂವರು ಮಹನೀಯರ ಕೊಡುಗೆಯನ್ನು ಶಾಶ್ವತವಾಗಿ ನೆನೆಯುವ ಕೆಲಸವಾಗುತ್ತದೆ ಎಂದು ಇಳೈ ಆಳ್ವಾರ್ ಸ್ವಾಮೀಜಿ ತಿಳಿಸಿದರು
ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್,ಜೀವದ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,
ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಕಾರ್ಯದರ್ಶಿ ಮಂಜುಳಾ, ಆರ್ ಸೋಮಶೇಖರ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್,ಸೋಮಶೇಖರ್,ಸಿದ್ದೇಶ್,ವೈದ್ಯರಾದ ದೇವೇಗೌಡ, ವಿನೋದ್, ಕಡಕೋಳ ಜಗದೀಶ್, ರಾಘವೇಂದ್ರ, ಶಿವು, ಮಿರ್ಲೇ ಪನೀಶ್, ಸುಚಿಂದ್ರ, ಸಂಪತ್, ಭಾರದ್ವಾಜ್, ರಾಜಗೋಪಾಲ್, ದುರ್ಗಾ ಪ್ರಸಾದ್ ಮತ್ತಿತರರು ಹಾಜರಿದ್ದರು.