ಮೈಸೂರು,ಮಾ.6: ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ಸುಶಮೀoದ್ರ ತೀರ್ಥ ಶ್ರೀಪಾದಂಗಳವರ ಸೇವಾ ಸಂಘದ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 430ನೇ ವರ್ಧಂತಿ ಪ್ರಯುಕ್ತ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಪ್ರಸಾದ ವಿತರಿಸಿ ಮಾತನಾಡಿದ ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್, ಗುರುಸಾರ್ವಭೌಮರು ಹಾಗೂ ಮಂತ್ರಾಲಯ ಪ್ರಭುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳು ಸುಮಾರು ದಶಕಗಳ ಹಿಂದೆ ಭಾವನಾತ್ಮಕ ಸೇವೆ ಮಾಡಿದ ದೈವಾಂತ ಸಂಭೂತರಲ್ಲಿ ಒಬ್ಬರು ಎಂದು ಬಣ್ಣಿಸಿದರು.
ಭಗವಂತನು ಶುಭ ಗುಣಗಳಿಂದ ತುಂಬಿದ್ದಾನೆ ಮತ್ತು ಸಂಪೂರ್ಣವಾಗಿ ದೋಷರಹಿತನಾಗಿದ್ದಾನೆ, ಅವನು ರಾಮ, ಬ್ರಹ್ಮ ಮತ್ತು ಇತರ ಎಲ್ಲಾ ದೇವತೆಗಳ ಪ್ರಭು ಎಂದು ಬಲವಾಗಿ ನಂಬಿದ ಕಲಿಯುಗದ ಕಲ್ಪವೃಕ್ಷ ಕಾಮದೇನು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸುಶಮೀoದ್ರ ತೀರ್ಥ ಶ್ರೀಪಾದಂಗಳವರ ಸೇವಾ ಸಂಘದ ಅಧ್ಯಕ್ಷ ಡ್ರೈ ಗೋಬಿ ನಾಗರಾಜ್, ಪಂಚಾಯತ್ ರಾಜ್ ಕಾಂಗ್ರೆಸ್ ಕಾರ್ಯದರ್ಶಿ ಲೋಕೇಶ್, ಮೈಸೂರು ನಗರ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ರಾಮಪ್ಪ ರಮೇಶ್,ಕೃಷ್ಣಪ್ಪ ಗಂಟಯ,ಮಹದೇವ್ ಮತ್ತು ಸಂಘದ ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.