ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ

Spread the love

ಮೈಸೂರು: ಮಹಾಶಿವರಾತ್ರಿ ಪ್ರಯುಕ್ತ ಮೈಸೂರು ಜಿಲ್ಲೆ ನಂಜನಗೂಡು ಸಮೀಪ ಪೇಪರ್ ಮಿಲ್ ಬಳಿ ಇರುವ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.

ನಿನ್ನೆ ಮುಂಜಾನೆಯಿಂದಲೇ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ ರುದ್ರಾಕ್ಷಿ ಹಾರಗಳು ಮತ್ತು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.

ನಿನ್ನೆ ಮಧ್ಯರಾತ್ರಿ ಕೂಡಾ ಪೂಜೆ ಮಾಡಿ ಮಂಗಳಾರತಿ ಮಾಡಲಾಯಿತು. ಇಂದು ಮುಂಜಾನೆಯವರೆಗೂ ಪೂಜೆ ಮಂಗಳಾರತಿಯನ್ನು ಮಾಡಿ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಭಕ್ತರಿಗೆ ತೀರ್ಥ‌,ಪ್ರಸಾದ ವಿನಿಯೋಗ ಮಾಡಲಾಯಿತು.ನೂರಾರು ಮಂದಿ ಶಿವನ ದರ್ಶನ ಪಡೆದು ಪುನೀತರಾದರು.