ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಗೆ ಲಕ್ಷ್ಮಿ ಅಲಂಕಾರ

Spread the love

ಮೈಸೂರು: ಮೈಸೂರಿನ ರಾಜಕುಮಾರ್ ರಸ್ತೆಯಲ್ಲಿರುವ ಶ್ರೀ ಪ್ರಸನ್ನ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.

ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರಿಗೆ ಲಕ್ಷ್ಮಿ ಅಲಂಕಾರ ಮಾಡಲಾಗಿತ್ತು.

ಪ್ರಾತಃಕಾಲದಲ್ಲೇ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿ ತೋಮಾಲೆ ಸೇವೆ ನೆರವೇರಿಸಲಾಯಿತು.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಸಂಸ್ಥಾಪಕರಾದ ಎಚ್‌.ಜಿ ಗಿರಿಧರ್ ಅವರು ಒಂದು ಲಕ್ಷ್ಮಿ ಕಾಯಿನ್, ಒಂದು ಕವಡೆ, ಕಮಲದ ಬೀಜ ಹಾಗೂ ಗುಲಗಂಜಿಯನ್ನು ವಿತರಿಸಿ ಶುಭ ಕೋರಿದರು.