ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮ ನಡೆಯುತ್ತಿದೆ.

ಇಂದಿನಿಂದ 21 ತಾರೀಕಿನ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ಭಕ್ತಾದಿಗಳ ಶ್ರೇಯಾಭಿವೃದ್ಧಿ ಹಾಗೂ ಲೋಕಕಲ್ಯಾಣಾರ್ಥವಾಗಿ ಪಾಂಚರಾತ್ರ ಆಗಮ ಶಾಸ್ತ್ರ ಪ್ರಕಾರವಾಗಿ ಶ್ರೀ ಸ್ವಾಮಿಯವರ ಮಹಾ ಸಂಕಲ್ಪ ಪುಣ್ಯಾಹ ವಾಚನ ರಕ್ಷಾ ಬಂಧನ ,
ಅಂಕುರಾಪರ್ಣಾ,ಧ್ವಜಾರೋಹಣ, ಕಲಶ ಪ್ರತಿಷ್ಠೆ ,ಹಾಗೂ ವಿಶೇಷವಾಗಿ ಗರುಡ ದೇವರಿಗೆ ಪಂಚಾಮೃತ ಹಾಗೂ ವಿವಿಧ ದ್ರವ್ಯಗಳಿಂದ ವಿಶೇಷವಾಗಿ ಅಭಿಷೇಕ ಇತ್ಯಾದಿ ಪೂಜಾ ಕಾರ್ಯಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್ ಕಷ್ಣಮೂರ್ತಿ ನೆರವೇರಿಸಿದರು.

ಅರ್ಚಕರಾದ ದಾಶರತಿ ನೇತೃತ್ವದಲ್ಲಿ ಗರುಡ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.