ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ನೂತನ
ಪಟ್ಟಾಧಿಕಾರ ಮಹೋತ್ಸವ ಗಣ್ಯರ ಸಮ್ಮುಖದಲ್ಲಿ ವಿಶೇಷವಾಗಿ ನೆರವೇರಿತು.
ಬೆಂಗಳೂರಿನ ಕೆಂಗೇರಿ ಮಠದ ಪೀಠಾಧಿಪತಿಗಳಾದ ಪೂಜ್ಯ ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳು ತಮ್ಮ ಉತ್ತರಾಧಿಕಾರಿಯನ್ನಾಗಿ ಮಂಡ್ಯದ ಅಡಿಷನಲ್ ಸ್ಪೆಷಲ್ ಡಿ ಸಿ ಯಾಗಿದ್ದ ಡಾ. ಹೆಚ್ ಎಲ್ ನಾಗರಾಜ್ ಅವರಿಗೆ ಪಟ್ಟಾಧಿಕಾರ ಮಹೋತ್ಸವವನ್ನು ನೆರವೇರಿಸಿದರು.
ಈ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಎಲ್ಲಾ ಸಮುದಾಯಗಳ ಮಠಾಧಿಪತಿಗಳು ಆಗಮಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಗಣ್ಯರ ಉಪಸ್ಥಿತಿಯಲ್ಲಿ ಉತ್ತರಾಧಿ ಕಾರಿಗಳಾಗಿ ನಿಯೋಜಿತವಾಗಿರುವ ಡಾ. ಎಚ್ ಎಲ್ ನಾಗರಾಜ ಅವರಿಗೆ ಪಟ್ಟಾಧಿಕಾರವನ್ನು ನೆರವೇರಿಸಿ ಜಗದ್ಗುರು ಶ್ರೀ ನಿಶ್ಚಲಾನಂದನಾಥ ಮಹಾಸ್ವಾಮಿಗಳು ಎಂದು ನೂತನ ನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲೆಯಿಂದ ಅಭಿಮಾನಿಗಳು ತೆರಳಿ ಶುಭಕೋರಿ, ನೂತನ ಗುರುಗಳಿಂದ ಆಶೀರ್ವಾದ ಪಡೆದರು.
ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಹೆಚ್ ಎಸ್ ಲಕ್ಷ್ಮೇಗೌಡ, ವರಕೂಡು ಕೃಷ್ಣೇಗೌಡ, ಬೂಕನಕೆರೆ ವಿಜಯೇಂದ್ರ, ಹನುಮಂತಯ್ಯ, ಕೃಷ್ಣಪ್ಪ, ಕೆಂಪೇಗೌಡ ಎಸ್ , ರಾಮು ಬಿ ಎಂ, ರಘುರಾಂ , ಚಂದ್ರು, ಗೀತಾ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.