ಮೈಸೂರು: ಬಾಲ್ಯದಲ್ಲಿಯೇ ಮಕ್ಕಳಿಗೆ ಧಾರ್ಮಿಕತೆಯ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟು, ಸಂಸ್ಕಾರವಂತರನ್ನಾಗಿಸುವ ಕರ್ತವ್ಯ ಹೆತ್ತವರದ್ದು ಎಂದು ಕಂಚಿ ಕಾಮಕೋಟಿ ಪೀಠದ ವಿದ್ವಾನ್ ಚಂದ್ರಶೇಖರ್ ಭಟ್ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ
ಹಮ್ಮಿಕೊಂಡಿರುವ 15ದಿನದ ಧಾರ್ಮಿಕ ಬೇಸಿಗೆ ಶಿಬಿರದಲ್ಲಿ 7 ರಿಂದ 14 ವರ್ಷದ ಬಾಲಕ ಬಾಲಕಿಯರಿಗೆ ಸಂಧ್ಯಾವಂದನೆ, ದೇವರ ನಾಮ, ಶ್ಲೋಕಗಳು, ಭಜನೆ, ನೀತಿ ಕಥೆ, ಇನ್ನಿತರ ಶಿಬಿರಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಧಾರ್ಮಿಕ ಚಿಂತನೆ ಅಗತ್ಯ, ಬಾಲ್ಯದಿಂದಲೇ ದೇವರ ಬಗ್ಗೆ ನಂಬಿಕೆ ಹಾಗೂ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು,
ಎಂದು ಸಲಹೆ ನೀಡಿದರು.
ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್, ಟಿ.ವಿಯಲ್ಲಿ ಕಳೆದು ಹೋಗುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಸಂಸ್ಕಾರದ ಬೀಜ ಬಿತ್ತಿ, ದೇಶದ ಸುಸಂಸ್ಕೃತ ಪ್ರಜೆಗಳನ್ನಾಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಮಹಂಸ ಯೋಗ ಅಕಾಡೆಮಿಯ ಅಧ್ಯಕ್ಷ ಶಿವಪ್ರಕಾಶ್, ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರಾದ ರವಿ ಶಾಸ್ತ್ರಿ, ಚಂದ್ರಶೇಖರ್, ಶ್ರೀವತ್ಸ, ಶ್ರೀಕಾಂತ್ ಆಚಾರ್, ಸುರೇಶ್ ಆಚಾರ್, ಮಂಗಳ ಮತ್ತಿತರರು ಹಾಜರಿದ್ದರು.