ಮೈಸೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪನವರು ಜಿಲ್ಲೆಯ ಪಿರಿಯಾಪಟ್ಟಣ ಸಮೀಪದ ಬೈಲುಕುಪ್ಪೆಯಲ್ಲಿ 14ನೇ ಟಿಬೆಟಿಯನ್ ಧರ್ಮಗುರು ಶ್ರೀ ದಲೈ ಲಾಮಾ ಅವರನ್ನು ಭೇಟಿ ಮಾಡಿದರು.
ಮಹದೇವಪ್ಪ ಅವರು ದಲೈಲಾಮಾ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದರು.
ಸಾಮಾಜಿಕ ಶಾಂತಿಯ ಜೊತೆಗೆ ಬುದ್ಧನ ತತ್ವಗಳನ್ನು ಪಸರಿಸುವ ಕೆಲಸ ಮಾಡುತ್ತಿರುವ ಅವರ ಕಾರ್ಯಗಳು ಮತ್ತು ಅವರ ವಿಚಾರಗಳ ಬಗ್ಗೆ ಕೆಲಹೊತ್ತು ಮಾತುಕತೆ ನಡೆಸಿದ ಸಚಿವರು ಅವರ ಬೇಡಿಕೆಗಳನ್ನು ಆಲಿಸಿದರು.ನಂತರ ಅವರ ಪ್ರೀತಿಯ ಆತಿಥ್ಯ ಸ್ವೀಕರಿಸಿದರು.
ಇದೇ ವೇಳೆ ಬುದ್ಧನ ನೆಲವಾಗಿ ರೂಪುಗೊಂಡಿರುವ ಬೈಲುಕುಪ್ಪೆಯಲ್ಲಿ ನಿರ್ಮಿಸಲಾದ ಬೌದ್ಧ ಮಂದಿರವನ್ನು ವೀಕ್ಷಿಸಿದರು.
ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮದ ಬಗ್ಗೆ ಅಲ್ಲಿನ ಜನರಿಗೆ ಇರುವ ಸ್ಪಷ್ಟತೆ ಮತ್ತು ಕಾಳಜಿಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.
ಇದೇ ವೇಳೆ ಟಿಬೆಟಿಯನ್ನರು ವಾಸಿಸುವ ಪ್ರದೇಶಕ್ಕೆ ಸಂಬಂಧಿಸಿದ ಕೆಲವು ಬೇಡಿಕೆಗಳ ಬಗ್ಗೆಯೂ ಸಚಿವರು ಚರ್ಚಿಸಿದರು.