ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಯವರು ಭೈರವೈಕ್ಯರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಶ್ರೀಗಳು ತಡರಾತ್ರಿ 12ಗಂಟೆ 1 ನಿಮಿಷಕ್ಕೆ ಕೆಂಗೇರಿಯ ಶ್ರೀಕ್ಷೇತ್ರದಲ್ಲಿ ಭೈರವೈಕ್ಯರಾಗಿದ್ದಾರೆ.
ಶ್ರೀ ಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ ಯವರ ಅಂತಿಮ ದರ್ಶನಕ್ಕೆ ಶನಿವಾರ ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿತ್ತು.
ನಂತರ ವಿವಿಧ ಧಾರ್ಮಿಕ ಮುಖಂಡರು, ಪೀಠಾಧ್ಯಕ್ಷರ ನೇತೃತ್ವದಲ್ಲಿ ಭೈರವೈಕ್ಯರಾದ ಶ್ರೀಗಳ ಅಂತಿಮ ವಿಧಿ ವಿಧಾನಗಳು ನೆರವೇರಿತು.
ಶ್ರೀಗಳ ಉತ್ತರಾಧಿಕಾರಿ ಪೀಠಾಧ್ಯಕ್ಷರಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೇರವೇರಿಸಿದರು.
ಹಲವಾರು ಧಾರ್ಮಿಕ ಮುಖಂಡರು, ರಾಜಕೀಯ ಗಣ್ಯರು ಶ್ರೀ ಮಠದ ಭಕ್ತರು ಶ್ರೀಗಳ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.