ಭಕ್ತಿಯಿಂದ ನವ ದುರ್ಗೆಯರ ಆರಾಧಿಸಿ: ಬಿ ವಿ ಮಂಜುನಾಥ್

ಮೈಸೂರು: ನವರಾತ್ರಿಯಲ್ಲಿ ಶ್ರದ್ಧಾ, ಭಕ್ತಿಯಿಂದ ನವ ದುರ್ಗೆಯರನ್ನು ಆರಾಧಿಸಬೇಕು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಬಿ. ವಿ ಮಂಜುನಾಥ್ ಹೇಳಿದರು.

ನಗರದ ರಾಮಾನುಜ ರಸ್ತೆಯಲ್ಲಿರುವ ನಮೋ ಯೋಗ ಭವನದಲ್ಲಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನವರಾತ್ರಿ ಅಂಗವಾಗಿ ಸರಸ್ವತಿ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಓದುವ ಸಾಮಗ್ರಿ ಹಾಗೂ ಸರಸ್ವತಿ ಚಿತ್ರ ನೀಡಿ ಮಾತನಾಡಿದರು.

ಒಂಬತ್ತು ತಿಂಗಳು ಹೆತ್ತು,ಹೊತ್ತು ಸಾಕಿ ಸಲುಹಿದ ತಾಯಿ,ತಂದೆಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳಬೇಕು,ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದು ತಾಯಿ ಸೇವೆಯನ್ನು ಎಷ್ಟು ಮಾಡಿದರೂ ತಾಯಿ ಋಣ ತೀರಿಸಲು ಆಗುವುದಿಲ್ಲ ಎಂದು ಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ, ಹಬ್ಬ-ಹರಿದಿನಗಳಿಗೆ ಭಾರತೀಯ ಪರಂಪರೆಯಲ್ಲಿ ಮಹತ್ವದ ಸ್ಥಾನವಿದೆ. ಪರಸ್ಪರ ದ್ವೇಷ, ಅಸೂಯೆ ಹಾಗೂ ಸ್ವಾರ್ಥ ಮನೋಭಾವ ತೊರೆದು ಪ್ರೀತಿ ವಿಶ್ವಾಸದ ತಳಹದಿಯ ಮೇಲೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಇದೇ ವೇಳೆ ಹಿರಿಯ ಶಿಕ್ಷಕರಾದ
ಕೆ ಎಸ್ ಶಶಿಕಲಾ, ಬಿ ಬಾಲಕೃಷ್ಣ, ಮಾಲಂಗಿ ಸುರೇಶ್, ಪದ್ಮ, ಸುತ್ತೂರು ಜಯರಾಮ್ ಸನ್ಮಾನಿಸಲಾಯಿತು.

ಕಾಂಗ್ರೆಸ್ ಮುಖಂಡರಾದ ಜಿ ರಾಘವೇಂದ್ರ, ಅಪೂರ್ವ ಸುರೇಶ್, ಸಂಘದ ಅಧ್ಯಕ್ಷರಾದ ನಾಗಶ್ರೀ ಸುಚೇಂದ್ರ , ಯೋಗ ಭವನದ ಪ್ರಧಾನ ಕಾರ್ಯದರ್ಶಿ ಎಸ್ ಸೇತುರಾಮ್, ಸಮಾಜ ಸೇವಕರಾದ ವಿದ್ಯಾ, ಮಧು ಎನ್ ಪೂಜಾರ್, ಸುಚೇಂದ್ರ, ರೇಖ ಶ್ರೀ, ರೂಪ ಶ್ರೀ, ಮಹಾನ್ ಶ್ರೇಯಸ್ ಮುಂತಾದವರು ಉಪಸ್ಥಿತರಿದ್ದರು.