ಮೈಸೂರು: ಮೈಸೂರಿನ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಹೊರತಂದಿರುವ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಮೈಸೂರಿನ ಸಾಂಸ್ಕೃತಿಕ ಪ್ರತಿಷ್ಠಾಪನೆಗಳ ಸಂಸ್ಥೆಗಳಲ್ಲಿ ಒಂದಾದ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು ವತಿಯಿಂದ ಹೊಸ ವರ್ಷದ ಪ್ರಯುಕ್ತ ಸಂಸ್ಥೆಯ ನೂತನ ವರ್ಷ 2025ರ ಕ್ಯಾಲೆಂಡರ್ ಅನ್ನು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾಪನ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ಹಿಂದುಳಿದ ವರ್ಗದ ರಮೇಶ ರಾಮಪ್ಪ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಮರಾಟಿಕ್ಯಾತನಹಳ್ಳಿ, ಕಡಕೋಳ ಶಿವು, ರಾಮಚಂದ್ರು ಮತ್ತು ಮಾದೇವ ಉಪಸ್ಥಿತರಿದ್ದರು.
