ಶ್ರೀ ಬಾಳೆಎಲೆ ಮಲ್ಲಿಕಾರ್ಜುನ ಸ್ವಾಮಿ, ಶ್ರೀ ಶನೇಶ್ವರ ಸ್ವಾಮಿಯ ವಿಶೇಷ ಪೂಜೆಗಳು

Spread the love

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ,ಮಾ.2:ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದ ಪ್ರಸಿದ್ಧ ಶ್ರೀ ಬಾಳೆಎಲೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಬಾಳೆಎಲೆ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಶನೇಶ್ವರ ಸ್ವಾಮಿಯ ವಿಶೇಷ ಪೂಜೆಗಳು ವಿಜೃಂಭಣೆಯಿಂದ ಜರುಗಿದವು.

ಹಾಗೂ  ಭಕ್ತರಿಗೆ ಅನ್ನ ಸಂತಪ೯ಣೆ ನಡೆಸಲಾಯಿತು.

ಹಂಪಾಪುರ ಗ್ರಾಮದ ಕಾವೇರಿ ತಟದಲ್ಲಿ ನೆಲೆಸಿರುವ ಪ್ರಸಿದ್ಧ ಶ್ರೀ ಬಾಳೆಎಲೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.

ಶ್ರೀ ಸ್ವಾಮಿಯು ಆಂಧ್ರದ ಶ್ರೀಶೈಲ ಪರ್ವತದಿಂದ ತನ್ನ ಸಹೋದರ ವೀರಭದ್ರ ಹಾಗೂ ಸಹೋದರಿ ಬಿಸಿಲು ಮಾರಮ್ಮನೊಡನೆ ಇಲ್ಲಿ ಬಂದು ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ.

ಇಲ್ಲಿ ಹಿಂದೆ ಅನೇಕ ಪವಾಡಗಳು ನಡೆಯುತ್ತಿದ್ದವು ಕ್ರಮೇಣ ಎಲ್ಲವೂ ಬದಲಾಗಿದೆ ಎಂದು ಹಿರಿಯರು ಹೇಳುತ್ತಾರೆ.

ಈ ದೇವಾಲಯಕ್ಕೆ ಸುತ್ತ ಮುತ್ತಲಿನ ಹಾಗೂ ನದಿಯಾಚೆಗಿನ ಮಳವಳ್ಳಿ ತಾಲೂಕು ಹಾಗೂ ಟಿ ನರಸೀಪುರ ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ಒಕ್ಕಲಾಗಿದ್ದು ಅಪಾರ ಭಕ್ತ ವೃಂದವನ್ನು ಹೊಂದಿದೆ.

ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಶನಿವಾರ ದೇವರಿಗೆ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಶ್ರೀ ಸ್ವಾಮಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಹಾಪ್ರಸಾದ ವಿನಿಯೋಗ ಹಾಗೂ ನವಗ್ರಹ ಪೂಜೆ,ನವಗ್ರಹ ಹೋಮ,ಶ್ರೀ ಶನೇಶ್ವರಸ್ವಾಮಿಯವರ ಮಹಾ ಪೂರ್ಣಾಹುತಿ, ಮಹಾಕುಂಭಾಭಿಷೇಕ ಮಧ್ಯಾಹ್ನ ಅನ್ನಸಂತರ್ಪಣೆ ಕೂಡಾ ಹಮ್ಮಿಕೊಳ್ಳಲಾಗಿತ್ತು ನೂರಾರು ಮಂದಿ ಭಾಗವಹಿಸಿ ದೇವರ ದರ್ಶನ ಪಡೆದರು.

ಮೈಸೂರಿನ ನಟರಾಜು, ಹಂಪಾಪುರ ರಾಜೇಶ್ ಮತ್ತು ತಂಡ‌ ಹಾಗೂ ಮಹೇಶ್, ಶ್ರೀ ಶನೇಶ್ವರ ಸ್ವಾಮಿಯ ಹರಿಕಥೆ ನಡೆಸಿಕೊಟ್ಟರು. ಈ ಎಲ್ಲಾ ಕಾರ್ಯಕ್ರಮ ದೇಗುಲದ ಪ್ರಧಾನ ಅರ್ಚಕರಾದ ಪರಮೇಶ್ವರರಾಧ್ಯರವರ ನೇತೃತ್ವದಲ್ಲಿ ಜರುಗಿದವು. 

ಅರ್ಚಕರಾದ ಸಂದೀಪ್ ಆರಾಧ್ಯ, ಗ್ರಾಮಸ್ಥರು ಹಾಗೂ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಭಾಗವಹಿಸಿದ್ದರು. 

.