ಶ್ರಾವಣ ಮೊದಲ ಶನಿವಾರ: ಶ್ರೀ ಕಲ್ಯಾಣ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ ಸಜ್ಜು

Spread the love

ಮೈಸೂರು: ಮೈಸೂರಿನ ಕಲ್ಯಾಣ ಗಿರಿ ನಗರ, ಡಾ ರಾಜಕುಮಾರ್ ರಸ್ತೆಯಲ್ಲಿರುವ
ಶ್ರೀ ಕಲ್ಯಾಣ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಶ್ರಾವಣ ಶನಿವಾರದ ಪೂಜಾಕಾರ್ಯಕ್ಕೆ ದೇವಾಲಯ ಸಂಪೂರ್ಣ ‌ಸಿದ್ದವಾಗಿದೆ.

ಈ ದೇವಸ್ಥಾನಕ್ಕೆ ಸಾವಿರಾರು ಭಕ್ತರು ವೆಂಕಟರಮಣ ಸ್ವಾಮಿಯ ದರುಶನ ಮಾಡಲು ಬರುವ ಹಿನ್ನೆಲೆಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿ ಹೂ ಮಾಲೆ‌ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ನಾಳೆ ಬೆಳಿಗ್ಗೆ 6.30 ಕ್ಕೆ ಸುಪ್ರಭಾತ ಸೇವೆ,7 ಗಂಟೆಗೆ ತೋಮಾಲೆ ಸೇವೆ,7.30 ಕ್ಕೆ ಮಹಾಮಂಗಳಾರತಿ ನೆರವೇರಲಿದೆ.

ಸಂಜೆ 7 ಗಂಟೆಗೆ ಪ್ರಾಕಾರೋತ್ಸವ ನೆರವೇರಲಿದೆ.