ತಂದೆಯನ್ನು ಗೌರವಿಸುವುದು ಮಕ್ಕಳ ಕರ್ತವ್ಯ: ನಜರ್ಬಾದ್ ನಟರಾಜ್

Spread the love

ಮೈಸೂರು: ಕುಟುಂಬದಲ್ಲಿ ಮಕ್ಕಳಿಗೆ
ತಂದೆಯೇ ನಾಯಕ, ಶಕ್ತಿ, ಆಸರೆ, ಆಧಾರ ಸ್ತಂಭ ಹಾಗೂ ಕಷ್ಟಗಳನ್ನು ನಿವಾರಿಸುವ ಪರಿಪಾಲಕ ಅವರನ್ನು ಗೌರವಿಸುವುದು ಮಕ್ಕಳ ಕರ್ತವ್ಯ ಎಂದು ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಹೇಳಿದರು.

ಮೈಸೂರಿನ ನ್ಯಾಯಾಲಯದ ಮುಂಭಾಗ ಉದ್ಯಾನವನದಲ್ಲಿ ಚಾಮುಂಡೇಶ್ವರಿ ಬಳಗದ ವತಿಯಿಂದ ಆಯೋಜಿಸಿದ್ದ ತಂದೆಯಂದಿರ ದಿನಾಚರಣೆ ಕಾರ್ಯಕ್ರಮದಲ್ಲಿ ತಂದೆಯ ಹೆಸರಿನಲ್ಲಿ ಗಿಡ ನೆಟ್ಟು ನೀರು ಹಾಕಿ ಅವರು ಮಾತನಾಡಿದರು.

ತಂದೆಯಂದಿರು ಕುಟುಂಬದ ಬೆನ್ನೆಲುಬು, ಮಾರ್ಗದರ್ಶಕರು ಮತ್ತು ಪ್ರೇರಣೆ ನೀಡುವ ವ್ಯಕ್ತಿಗಳಾಗಿದ್ದಾರೆ, ಕುಟುಂಬಕ್ಕಾಗಿ ಹಗಲಿರುಳು ದುಡಿದು ಅನೇಕ ತ್ಯಾಗಗಳನ್ನು ಮಾಡುವುದರೊಂದಿಗೆ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸುತ್ತಾರೆ, ಅವರಿಗಾಗಿ ಕುಟುಂಬದ ಸದಸ್ಯರು ದೇವರಲ್ಲಿ ಪ್ರತಿದಿನ ಪ್ರಾರ್ಥಿಸುವುದರೊಂದಿಗೆ ಹೆಚ್ಚು ಪ್ರೀತಿಸುವುದನ್ನು ಕಲಿಯಬೇಕು ಎಂದು ನಜರ್ಬಾದ ನಟರಾಜ್ ಸಲಹೆ ನೀಡಿದರು.

ಸಂದರ್ಭದಲ್ಲಿ ಸಿದ್ದರಾಮಯ್ಯ ಬ್ರಿಗೇಡ್ ರಾಜ್ಯ ಅಧ್ಯಕ್ಷ ಹಿನಕಲ್ ಉದಯ್, ಕಾಂಗ್ರೆಸ್ ಮುಖಂಡರಾದ ಆರಿಫ್ ಪಾಷಾ, ಜಿ. ರಾಘವೇಂದ್ರ, ಚಂದ್ರು,ರಾಜೇಶ್ ಪಳನಿ, ಲೋಕೇಶ್, ರಮೇಶ್ ರಾಮಪ್ಪ, ಎಸ್ ಎನ್ ರಾಜೇಶ್,ಸೇವಾದಳ ಕಾರ್ಯದರ್ಶಿ ಮೋಹನ್, ಗುಂಡಪ್ಪ, ಕೃಷ್ಣಪ್ಪ (ಗಂಡಯ್ಯ) ರವಿಚಂದ್ರ ಮತ್ತಿತರರು ಹಾಜರಿದ್ದರು.