ಶ್ರೀರಂಗಪಟ್ಟಣದಲ್ಲಿ ಗಣಪತಿ ಬೃಹತ್ ಶೋಭಾ ಯಾತ್ರೆ

Spread the love

ಶ್ರೀರಂಗಪಟ್ಟಣ:‌ ಶ್ರೀರಂಗಪಟ್ಟಣದಲ್ಲಿ
ಶನಿವಾರ ಗಣಪತಿ ಬೃಹತ್ ಶೋಭಾ ಯಾತ್ರೆ
ಯಶಸ್ವಿಯಾಗಿ ನೆರವೇರಿತು.

ಯುವ ಬ್ರಿಗೇಡ್ ಅಧ್ಯಕ್ಷ ರಂಜು ಶರ್ಮಾ ಅವರ ನೇತೃತ್ವದಲ್ಲಿ ವರಸಿದ್ಧಿ ವಿನಾಯಕನನ್ನು 11 ದಿನ ಶ್ರದ್ಧಾ ಭಕ್ತಿಯಿಂದ ಪೂಜೆ ಪುನಸ್ಕಾರಗಳು, ಹೋಮ ಹವನಗಳು ನಡೆಸಿ ಶನುವಾರ ಬೃಹತ್ ಶೋಭಾ ಯಾತ್ರೆ ಮಾಡಲಾಯಿತು.

ಶ್ರೀರಂಗಪಟ್ಟಣದ ವೇದಬ್ರಹ್ಮ ಶ್ರೀ ಡಾ. ಭಾನುಪ್ರಕಾಶ್ ಶರ್ಮ ಗುರೂಜಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಗುರೂಜಿ ಅವರು,ಗಣೇಶ ಹಬ್ಬದ ಮಹತ್ವ ತಿಳಿಸಿಕೊಟ್ಟರು.

ದಿವಾನ್ ಪೂರ್ಣಯ್ಯ ಬೀದಿಯ ಮೂಲಕ ಹಾದು ಪೇಟೆ ಬೀದಿಯಲ್ಲಿ ಸಾಗಿ ಶ್ರೀರಂಗಪಟ್ಟಣದ ಕಾವೇರಿ ನದಿಯ ಸ್ನಾನಘಟ್ಟದಲ್ಲಿ ಪೂಜೆ ಪುನಸ್ಕಾರಗಳನ್ನು ಮಾಡಿ ಪ್ರಸಾದ ವಿನಿಯೋಗವನ್ನು ಮಾಡಿ ನಂತರ ಗಣಪತಿಯನ್ನ ವಿಸರ್ಜಿಸಲಾಯಿತು.

ಶ್ರೀರಂಗಪಟ್ಟಣದ ನಾಗರಿಕರು ಹಾಗೂ ಸಮಸ್ತ ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಡೊಳ್ಳು ಕುಣಿತ ನಗಾರಿ ವೀರಗಾಸೆ ಮತ್ತಿತರ ಕಲಾತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು.

ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಕ್ಕೂ ಮೊದಲು ಗಣೇಶ ಹಬ್ಬವನ್ನು ಜಾತಿ ಭೇದ ಭಾವವಿಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪನೆ ಮಾಡಿ ಹಿಂದುಗಳನ್ನ ಒಗ್ಗೂಡಿಸಬೇಕೆಂದು ಆಚರಣೆಯನ್ನು ಜಾರಿಗೆ ತಂದರು.