ಮೈಸೂರು: ಆಷಾಢ ಮಾಸದ ಎರಡನೆ ಶುಕ್ರವಾರ ಪ್ರಯುಕ್ತ ಶಿವಾರ್ಚಕರ ಸಂಘ,
ಶ್ರೀರಾಮ ಗೆಳೆಯರ ಬಳಗ ಚಾಮುಂಡೇಶ್ವರಿ ಅಮ್ಮನವರ ಪೂಜಾ ಕಾರ್ಯ ನೆರವೇರಿಸಿದವು.
ಮೈಸೂರಿನ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಮುಂಭಾಗದಲ್ಲಿ ರಾಜ್ಯ ಶಿವಾರ್ವಕರ ಸಂಘದ ಗೌರವಾಧ್ಯಕ್ಷರಾದ ಅಂಬಳೆ ಶಿವಣ್ಣ ಅವರ ನೇತೃತ್ವದಲ್ಲಿ ಚಾಮುಂಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ ಹಮ್ಮಿಕೊಂಡು ಪ್ರಸಾದ ವಿನಿಯೋಗ ಮಾಡಲಾಯಿತು.
ಮುಖಂಡರಾದ ಎಸ್ ಆರ್ ಶಿವಕುಮಾರ್, (ಎಸ್ ಆರ್ ಎಸ್), ಎಚ್.ವಿ ಭಾಸ್ಕರ್, ಸಿ ಸಂದೀಪ್, ಪ್ರಭು ಶಂಕರ್, ಬಸವರಾಜು, ರಾಘು ಅರಸ್, ಮೋಹನ್, ಎಸ್ ನಾಗರಾಜ್ ಅವರು ಹಾಜರಿದ್ದರು.