ಮೈಸೂರು : ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಕರ್ನಾಟಕ ರಾಜ್ಯದಲ್ಲಿ ನಿಷೇಧ ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಶಿವಾಜಿ ಮಹಾರಾಜರ ಕೊಡುಗೆ ಕನ್ನಡ ನಾಡಿಗೆ ಶೂನ್ಯ ಎಂದಿದ್ದಾರೆ.

ಶಿವಾಜಿ ಸೈನ್ಯ ಕ್ರಿ ಶ ೧೬೭೬ ರಲ್ಲಿ ಕರ್ನಾಟಕಕ್ಕೆ ದಂಡ ಯಾತ್ರೆ ಕೈಗೊಳ್ಳುತ್ತದೆ,
ಈ ಸಮಯದಲ್ಲಿ ಶಿವಾಜಿಯ ಸೈನಿಕರು ಬೆಳವಾಡಿ ಸಮೀಪದ ಗೋ ಶಾಲೆಗೆ ತೆರಳಿ ಗೋವುಗಳನ್ನು ಅಪಹರಿಸುತ್ತಾರೆ.
ಇದು ಬೆಳವಡಿಯ ಮಲ್ಲಮ್ಮ ರನ್ನು ಕೆರಳಿಸುತ್ತದೆ ಏಕೆಂದರೆ ಹಿಂದೂ ಗಳಿಗೆ ಗೋವು ಗಳೆಂದರೆ ಸಾಕ್ಷಾತ್ ಮಾತೆಯೇ ಸರಿ ಅದರಲ್ಲಿಯೂ ಕೃಷಿಕ ಪಂಚಮಸಾಲಿ ಗಳಿಗೆ ಗೋವು ಗಳೆಂದರೆ ಪಂಚ ಪ್ರಾಣ.
ಗೋವುಗಳನ್ನು ಮರಳಿ ಪಡೆಯಲು ರಣಚಂಡಿ ಯಂತೆ ದಂಡೆತ್ತಿ ಹೋದ ಮಲ್ಲಮ್ಮನ ಎರಡು ಸಾವಿರ ಮಹಿಳಾ ಸೈನ್ನ ವನ್ನು ಕಂಡ ಶಿವಾಜಿ ಸೈನ್ಯ ಕಂಗಾಲಾಗುತ್ತದೆ.
ಮರಾಠ ಸಾಮ್ರಾಜ್ಯದ ಸೈನಿಕರನ್ನು ಮಹಿಳಾ ಸೈನ್ಯ ಧೂಳೀಪಟ ಮಾಡುತ್ತದೆ ಮಲ್ಲಮ್ಮ ಪರಾಕ್ರಮ ವನ್ನು ಕಂಡ ಶಿವಾಜಿ ಮಲ್ಲಮ್ಮ ಳನ್ನು ಸಾಕ್ಷಾತ್ ತುಳಜಾ ಭವಾನಿ ಎಂದು ಬಣ್ಣಿಸಿ ತಾನು ಮಾಡಿದ ತಪ್ಪಿಗೆ ಕ್ಷಮೆ ಯಾಚನೆ ಮಾಡಿ ಅಪಹರಿಸಿದ ಗೋವುಗಳನ್ನು ಹಿಂದಿರುಗಿಸಿ ಮಲ್ಲಮ್ಮನ ಬಳಿ ಪ್ರಾಣ ಭಿಕ್ಷೆ ಬೇಡುತ್ತಾನೆ.ಇದು ಇತಿಹಾಸ.

ಇಂತವರ ಜಯಂತಿಯನ್ನು ಕರ್ನಾಟಕ ರಾಜ್ಯದಲ್ಲಿ ಆಚರಣೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಶ್ನಿಸಿದ್ದಾರೆ.
ನಮ್ಮ ಕರ್ನಾಟಕ ರಾಜ್ಯದಲ್ಲೇ ಪರಾಕ್ರಮ ಮೆರೆದಿದ್ದ ಕನ್ನಡದ ಅನೇಕ ರಾಜರುಗಳು ಇರುವಾಗ ಪರರಾಜ್ಯದ ರಾಜನನ್ನು ಅದರಲ್ಲೂ ನಮ್ಮ ಕನ್ನಡತಿ ಬೆಳವಡಿ ಮಲ್ಲಮ್ಮಳ ಬಳಿ ಸೋತು ಸುಣ್ಣವಾಗಿ ಪ್ರಾಣ ಭಿಕ್ಷೆ ಪಡೆದವರ ಜಯಂತಿ ನಮ್ಮ ರಾಜ್ಯದಲ್ಲಿ ಅನವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಕರ್ನಾಟಕ ರಾಜ್ಯದಲ್ಲಿ ಶಿವಾಜಿ ಜಯಂತಿ ಆಚರಣೆ ಮಾಡದಂತೆ ನಿಷೇಧ ಮಾಡಬೇಕೆಂದು ತೇಜಸ್ವಿ ಮನವಿ ಮಾಡಿದ್ದಾರೆ.