ಶಂಕರಾಚಾರ್ಯರು ದೇಶ ಕಂಡ ಮಹಾನ್ ನಾಯಕರು-ಸಿ.ಎನ್ ಮಂಜೇಗೌಡ

Spread the love

ಮೈಸೂರು: ಶಂಕರಾಚಾರ್ಯರು ನಮ್ಮ ದೇಶ ಕಂಡ ಮಹಾನ್ ನಾಯಕರು ಎಂದು ವಿಧಾನ ಪರಿಷತ್ ಸದಸ್ಯರಾದ ಸಿ.ಎನ್ ಮಂಜೇಗೌಡ ತಿಳಿಸಿದರು.

ಇಂದು ಕರ್ನಾಟಕ ಸೇನಾ ಪಡೆ ವತಿಯಿಂದಮೈಸೂರಿನ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಅಂಗವಾಗಿ ವಿಶ್ವ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತಿ ಕಡಿಮೆ ಅವಧಿಯಲ್ಲಿ ದೇಶವನ್ನು ಎರಡು ಬಾರಿ ಬರೀ ಕಾಲ್ನಡಿಗೆಯಲ್ಲೇ ಸಂಚರಿಸಿ ಹಿಂದೂ ಧರ್ಮವನ್ನು ಪ್ರಚಾರ ಮಾಡಿ ಬೆಳೆಸಿದರು, ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದರು,ಅಂತಹ ಶಂಕರಾಚಾರ್ಯರನ್ನು ಪ್ರತಿಯೊಬ್ಬ ಭಾರತೀಯರು ನೆನೆಯಬೇಕು
ಎಂದು ಹೇಳಿದರು.

ಶಂಕರರು ಮನುಕುಲದ ಒಳಿತಿಗಾಗಿ ಶ್ರಮಿಸಿದರು. ಇಂತಹ ಮಹನೀಯರ ಹೆಸರಿನಲ್ಲಿ ಕರ್ನಾಟಕ ಸೇನಾ ಪಡೆ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಸಿ ವೆಂಕಟೇಶ್ -ಸಹಕಾರಕ್ಷೇತ್ರ, ಬಿ ಎಸ್ ರವಿಶಂಕರ್ – ಪೊಲೀಸ್ ಕ್ಷೇತ್ರ,ರಾಘವನ್ ಜಿ ಜಿ – ಹೋಟೆಲ್ ಉದ್ಯಮ ಕ್ಷೇತ್ರ,ಶೇಷಾದ್ರಿ ಕೆ – ಸಮಾಜ ಸೇವಾಕ್ಷೇತ್ರ, ಬಾಲಸುಬ್ರಮಣ್ಯ ಪಿ – ಮಾಹಿತಿ ವಿಜ್ಞಾನ ಕ್ಷೇತ್ರ, ಡಾ. ವಿಶ್ವನಾಥ್ ಎಚ್.ಎಸ್ – ಸರ್ಕಾರಿ ಕ್ಷೇತ್ರ, ಡಾ. ಶ್ರೀಷಾ ಭಟ್ – ಧಾರ್ಮಿಕ ಕ್ಷೇತ್ರ, ಎಂ ಎಸ್ ಮಹೇಶ್ – ಇಂಜಿನಿಯರ್ ಕ್ಷೇತ್ರ, ಶ್ರೀ ನಿಧಿ ಕುದರ್ ಸಿ ಎಸ್ – ಕೃಷಿ ಕ್ಷೇತ್ರ,ಶ್ರೀರಾಮ ಶೆಟ್ಟಿ ಎಸ್ – ಶಿಕ್ಷಣ ಕ್ಷೇತ್ರ ಇವರುಗಳಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 40 ವಿದ್ಯಾರ್ಥಿಗಳಿಗೆ ಅಖಿಲ ಭಾರತ ಕಾಂಗ್ರೆಸ್ ಸಮಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಪಿ ಲಕ್ಷ್ಮಣ್ ಪ್ರಭು ಅವರು ಪ್ರತಿಭಾ ಪುರಸ್ಕಾರ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ರಾಜ್ಯಾಧ್ಯಕ್ಷ ಚಾ .ರಂ. ಶ್ರೀನಿವಾಸ ಗೌಡ, ಗೋಲ್ಡನ್ ಸುರೇಶ್, ನೇಹಾ, ಮೊಗಣ್ಣಾಚಾರ್, ಕೇದಾರ್ ವಂದಿತ್, ಹನುಮಂತಯ್ಯ ಸಿಂದುವಳ್ಳಿ ಶಿವಕುಮಾರ್, ಶಾಂತರಾಜೇ ಅರಸ್, ಪ್ರಭುಶಂಕರ, ಭಾಗ್ಯಮ್ಮ, ಪದ್ಮ, ಪ್ರಭಾಕರ್, ಅಂಬಾ ಅರಸ್, ತಾಯೂರು ಗಣೇಶ್, ಬಸವರಾಜು, ನಂದಕುಮಾರ್, ರಘು ಅರಸ್, ರವಿ ನಾಯಕ್, ನಾಗರಾಜ್, ದರ್ಶನ್ ಗೌಡ, ವಿಷ್ಣು ಮಹದೇವಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.