ಸಮೀಕ್ಷೆ ಪಟ್ಟಿಯಲ್ಲಿನ ಲೋಪ ದೋಷಸರಿಪಡಿಸಿ: ವಿಕ್ರಂ ಅಯ್ಯಂಗಾರ್

Spread the love

ಮೈಸೂರು: ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೀಘ್ರ ಆರಂಭವಾಗಲಿದ್ದು, ಅದಕ್ಕಾಗಿ ಸಿದ್ಧಪ ಡಿಸಿರುವ ಪಟ್ಟಿಯಲ್ಲಿರುವ ದೋಷ ಸರಿಪಡಿಸಬೇಕೆಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.

ಮಾಧ್ಯಮ ಹೇಳಿಕೆಯಲ್ಲಿ ಈ ಒತ್ತಾಯ ಮಾಡಿರುವ ಅವರು, ಪಟ್ಟಿಯಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಬ್ರಾಹ್ಮಣ ಮುಸ್ಲಿಂ ಎಂಬೆಲ್ಲಾ ಹೆಸರುಗಳಿರುವುದು ಹೊಸ ಗೊಂದಲಕ್ಕೆ ಕಾರಣವಾಗಿವೆ.ಈ ರೀತಿ ಇರಲು ಸಾಧ್ಯವೇ ಇಲ್ಲ, ತಕ್ಷಣವೆ ಈ ಹೆಸರುಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬ್ರಾಹ್ಮಣ ಸಮುದಾಯದಲ್ಲೂ ಹಿಂದುಳಿದವರು, ಅಂಗವಿಕಲರು, ವೃದ್ಧರು, ವಿಧವೆಯರು, ಸಂಕಷ್ಟದಲ್ಲಿರುವವರು ಇದ್ದಾರೆ. ಸಮೀಕ್ಷೆಯಿಂದ ಇಂತಹ ಎಲ್ಲರಿಗೂ ಸಹಾಯ ದೊರೆಯಬೇಕೆಂದು ಹೇಳಿದ್ದಾರೆ.

‘ಹಿಂದೂ-ಬ್ರಾಹ್ಮಣ’ ಎಂದು ನಮೂದಿಸಿ: ಸಮೀಕ್ಷೆಗೆ ಬಂದಾಗ ಬ್ರಾಹ್ಮಣ ಸಮುದಾಯದವರು ‘ಹಿಂದೂ ಬ್ರಾಹ್ಮಣ’ ಎಂದಷ್ಟೇ ನಮೂದಿಸಬೇಕು. ಎಷ್ಟೇ ಕಾಲಂಗಳು ಇರಲಿ, ಅಲ್ಲಿ ಬ್ರಾಹ್ಮಣ ಉಪಪಂಗಡಗಳನ್ನು ನಮೂದಿಸುವ ಅಗತ್ಯ ಇಲ್ಲ. ಉಳಿದಂತೆ ಸಾಮಾಜಿಕ, ಶೈಕ್ಷಣಿಕ ವಿವರ ನೀಡಬೇಕು, ಇದರಿಂದಷ್ಟೇ ಬ್ರಾಹ್ಮಣರ ನಿಜವಾದ ಜನಸಂಖ್ಯೆಯ ವಿವರ, ಅವರ ನೈಜ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ಸಾಧ್ಯ ಎಂದು ವಿಕ್ರಂ ಅಯ್ಯಂಗಾರ್ ಅವರು ತಿಳಿಸಿದ್ದಾರೆ.