ಜೆಡಿಎಸ್ ಒಂದು ಭಾಗಕ್ಕೆ ಸೀಮಿತವಲ್ಲ:ನಿಖಿಲ್

Spread the love

ಕಲಬುರಗಿ: ನಮ್ಮ ಜೆಡಿಎಸ್‌ ಪಕ್ಷ ಕೇವಲ ಒಂದು ಭಾಗಕ್ಕೆ ಸೀಮಿತವಲ್ಲ ಎಲ್ಲೆಡೆ ಇರುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಜಿಲ್ಲೆಯ ಅವಳಿ ತಾಲೂಕುಗಳಾದ ಸೇಡಂ ಮತ್ತು ಚಿತ್ತಾಪುರದಲ್ಲಿ ಅಕ್ರಮ ಮರಳುಗಾರಿಕೆ ಮಿತಿಮೀರಿದ್ದು 165 ಕೋಟಿಗೊ ಹೆಚ್ಚು ಅವ್ಯವಹಾರ ಭ್ರಷ್ಟಾಚಾರ ಆಗಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ನಾಯಕರ ಅಕ್ಕ ಪಕ್ಕದಲ್ಲಿರುವ ಹಿಂಬಾಲಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.

ಕಲಬುರಗಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಕ್ರಮ ಮರಳುಗಾರಿಕೆ ಕಂಡರೂ ಸರ್ಕಾರ ಜಾಣ ಮೌನಕ್ಕೆ ಜಾರಿದೆ. ಕಾಗಿನ ನದಿಯನ್ನು ಸಂಪೂರ್ಣವಾಗಿ ಒಕ್ಕಲೆಬ್ಬಿಸಲಾಗಿದೆ. ಈ ಅಕ್ರಮದಲ್ಲಿ ಸರ್ಕಾರ ನೇರವಾಗಿ ಭಾಗಿಯಾಗಿದೆ. ಈ ಜಿಲ್ಲೆಯ ಶಾಸಕರು ಸಚಿವರ ಮೌನ ಇದನ್ನು ದೃಢಪಡಿಸುತ್ತದೆ ಎಂದು ಅವರು ಆರೋಪಿಸಿದರು.

ಸೇಡಂ ಮತ್ತು ಚಿತ್ತಾಪುರದಲ್ಲಿ ಅಕ್ರಮ ಮರಳುಗಾರಿಕೆಗೆ ಕೂಡಲೇ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತನಿಖೆ ಮಾಡಿ ಆಕ್ರಮ ಬಯಲು ಮಾಡಬೇಕು. ಅಕ್ರಮಕ್ಕೆ ಸಾತ್ ನೀಡಿದ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಈ ವೇಳೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಒಟ್ಟಾರೆಯಾಗಿ ಬಿಡುಗಡೆ ಮಾಡಿರುವ 13 ಕೋಟಿ ರೂಪಾಯಿಗಳ ವೆಚ್ಚದ ಕುರಿತು ಕೂಡಲೇ ಶ್ವೇತ ಪತ್ರ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಗತ್ಯ ಅಭಿರುದ್ದಿ ಕೆಲಸಗಳನ್ನ ಕೈ ಬಿಟ್ಟು ಅನಗತ್ಯ ಮತ್ತು ಅವಶ್ಯಕತೆ ಇಲ್ಲದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಹಣವನ್ನು ಪೋಲು ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಇದೆ ಎಂದು ಅವರು ಹೇಳಿದರು.

ಜೆಡಿಎಸ್ ಬಿಜೆಪಿ ಮೈತ್ರಿ ಕೈ ಬಿಡುವ ಪ್ರಶ್ನೆಯೇ ಇಲ್ಲ

ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ಮೈತ್ರಿ ಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಮುಂಬರುವ ಪಂಚಾಯತಿ ಚುನಾವಣೆಗಳಲ್ಲೂ ಕೂಡ ಈ ಒಪ್ಪಂದ ಶಾಸನ ರೂಪದಲ್ಲಿ ಕೆಲಸ ಮಾಡಲಿದೆ. ಈಗಾಗಲೇ ನಾವು ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡುತ್ತಿದ್ದಾನೆ ಎಂದು ತಿಳಿಸಿದರು

ಜೆಡಿಎಸ್ ಪಕ್ಷ ಯಾವುದೇ ಒಂದು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ . ಇದು ರಾಜ್ಯದ ಏಳೂವರೆ ಕೋಟಿ ಕನ್ನಡಿಗರು ಕಟ್ಟಿದಂತ ಪಕ್ಷ. ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಜೆಡಿಎಸ್ ಪಕ್ಷ ಹೋರಾಟದಿಂದ ಬಂದಿದೆ ಅದನ್ನು ನಾನು ಮುಂದುವರಿಸುತ್ತೇನೆ ನಿಮ್ಮ ಸಹಕಾರ ಇರಲಿ ಎಂದು ಮನವಿ ಮಾಡಿದರು.

ಕಲ್ಯಾಣ ಕರ್ನಾಟಕದ ಜೆಡಿಎಸ್ ಪಕ್ಷಕ್ಕೆ ಇತಿಹಾಸವಿದೆ

ಕಲ್ಯಾಣ ಕರ್ನಾಟಕದ ಕಲಬುರಗಿ ಜೆಡಿಎಸ್ ಪಕ್ಷದಿಂದ 6-7 ಶಾಸಕರನ್ನು ರಾಜ್ಯಕ್ಕೆ ನೀಡಿದ ಇತಿಹಾಸವಿದೆ ಮತ್ತೊಮ್ಮೆ ಈ ಇತಿಹಾಸ ಮರುಕಳಿಸಸೋಣ. ಈ ಹಿನ್ನೆಲೆಯಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡೋಣ.

ರಾಜ್ಯದ 19 ಕ್ಷೇತ್ರಗಳಲ್ಲಿ ನಾನು ಈಗ ಓಡಾಡಲು ಪ್ಲಾನ್ ಮಾಡಿದ್ದು ಈಗಾಗಲೇ ಬೀದರ್ ನಿಂದ ಓಡಾಟವನ್ನು ಆರಂಭಿಸಿದ್ದು, ನಾಳೆ ಯಾದಗಿರಿ ಸೇರಿದಂತೆ ಹಲವಡೆಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುತೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷದ ವೆಂಟರಾವ್ ನಾಡಗೌಡ ಅವರು, ಹನಮಂತಪ್ಪ ಆಲ್ಕೋಡ್ , ಶಾಸಕರಾದ ಶರಣಗೌಡ ಕಂದಕೂರ ಅವರು,ದೊಡ್ಡಪ್ಪಗೌಡ ಪಾಟೀಲ್ ನರಬೋಳ್, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ, ಬಾಲರಾಜ್ ಗುತ್ತೇದಾರ್, ಮುಖಂಡರಾದ ಕೃಷ್ಣಾರೆಡ್ಡಿ, ಶ್ರೀಮತಿ ಮಹೇಶ್ವರಿ ವಾಲಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು , ಕಾರ್ಯಕರ್ತರು ಉಪಸ್ಥಿತರಿದ್ದರು.