ಬೊಕಾರೊ,(ಬಿಹಾರ): ಭದ್ರತಾ ಪಡೆಗಳು ಎನ್ಕೌಂಟರ್ ನಡೆಸಿ ಅತಿ ಪ್ರಮುಖ ನಕ್ಸಲ್ ಮುಖಂಡ
ಪ್ರಯಾಗ್ ಮಾಂಝಿ ಅಲಿಯಾಸ್ ವಿವೇಕ್ ಸೇರಿದಂತೆ ಎಂಟು ನಕ್ಸಲರನ್ನು ಹೊಡೆದುರುಳಿಸಿದೆ.
ಭದ್ರತಾ ಪಡೆಗಳು ನಕ್ಸಲರ ವಿರುದ್ಧ ಪ್ರಮುಖ ಯಶಸ್ಸನ್ನು ಸಾಧಿಸಿದ್ದು, ಮೂರು ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹತ್ಯೆಯಾದ ನಕ್ಸಲರ ಪೈಕಿ ತಲೆಗೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾದ ಪ್ರಯಾಗ್ ಮಾಂಝಿ ಅಲಿಯಾಸ್ ವಿವೇಕ್ ಕೂಡಾ ಒಬ್ಬ.
ಲುಗು ಪರ್ವತದ ತಪ್ಪಲು ಸೇರಿದಂತೆ ಇಡೀ ಪ್ರದೇಶದಲ್ಲಿ ಪೊಲೀಸ್ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರ ಅಡಿಯಲ್ಲಿ, ನಕ್ಸಲೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಶೋಧಿಸಲಾಗುತ್ತಿದೆ.
ಈ ಎನ್ಕೌಂಟರ್ ಝೋನಲ್ ಕಮಾಂಡರ್ ಬಿರ್ಸೆನ್ ಮತ್ತು ಏರಿಯಾ ಕಮಾಂಡರ್ ಕುನ್ವರ್ ಮಾಂಝಿ ತಂಡದೊಂದಿಗೆ ನಡೆಯಿತು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಎಸ್ಪಿ ಮನೋಜ್ ಸ್ವರ್ಗಿಯಾರಿ ತಿಳಿಸಿದ್ದಾರೆ.
ಎನ್ಕೌಂಟರ್ ಮುಗಿದ ನಂತರವೇ ನಿಜವಾದ ಸಂಖ್ಯೆ ತಿಳಿಯಲಿದೆ ಎಂದು ಎಸ್ಪಿ ಹೇಳಿದ್ದಾರೆ.