ದ್ವಿತೀಯ ಪಿಯುಸಿ ಫಲಿತಾಂಶ:12ನೇ ಸ್ಥಾನಕ್ಕೆ ಜಿಗಿದ ಮೈಸೂರು ಜಿಲ್ಲೆ

Spread the love

ಮೈಸೂರು: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಳೆದ ವರ್ಷ 17 ನೇ ಸ್ಥಾನಕ್ಕೆ ಕುಸಿದಿದ್ದ ಮೈಸೂರು ಜಿಲ್ಲೆ ಈ ವರ್ಷ 12ನೇ ಸ್ಥಾನಕ್ಕೆ ಜಿಗಿದಿದೆ.

ಮೈಸೂರು ಜಿಲ್ಲೆಯಲ್ಲಿ ಈ ಬಾರಿ 31,510 ಒಟ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 23,485 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಈ ಮೂಲಕ ಶೇ 74 ರಷ್ಟು ಫಲಿತಾಂಶದೊಂದಿಗೆ ಮೈಸೂರು ಜಿಲ್ಲೆ 12ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಭಾರತ ಮಾತಾ ಪಿಯು ಕಾಲೇಜಿನ ವಿದ್ಯಾರ್ಥಿನಿ ತೇಜಸ್ವಿನಿ ವಾಣಿಜ್ಯ ವಿಭಾಗದಲ್ಲಿ 598 ಅಂಕ ಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಮೈಸೂರಿನ ಸದ್ವಿದ್ಯ ಪಿಯು ಕಾಲೇಜಿನ ಧಾತ್ರಿ .ಜಿ 596 ಅಂಕ ಪಡೆದು ಎರಡನೇ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ 594 ಅಂಕಗಳೊಂದಿಗೆ ಎಸ್ ವಿ ಸಿ ಜ್ಞಾನೋದಯ ಪಿಯು ಕಾಲೇಜಿನ ಎಸ್ ಅನಘ ಕರ್ನಿಸ್ ಹಾಗೂ ಬಿಜಿಎಸ್ ಪಿಯು ಕಾಲೇಜಿನ ಸಂಗೀತ ಎಸ್ ಇಬ್ಬರು ಪ್ರಥಮ ಸ್ಥಾನದಲ್ಲಿದ್ದಾರೆ.

ಕಲಾ ವಿಭಾಗದಲ್ಲಿ ಸೆಂಟ್ ಫಿಲೋಮೀನಾಸ್ ಕಾಲೇಜು ವಿದ್ಯಾರ್ಥಿನಿ ಬಿಬಿ ಅಮಿನಾ 584 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿ ಎಸ್ ಪರೀಕ್ಷಾನಂದ 583 ಅಂಕಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ.